ಕರ್ನಾಟಕ

karnataka

ETV Bharat / state

ಜಿ.ಪರಮೇಶ್ವರರನ್ನ ಯಾವ ಶಕ್ತಿ ಸೋಲಿಸಿತ್ತೋ, ಅದೇ ಶಕ್ತಿಯಿಂದ ಗುಟ್ಟು ರಟ್ಟಾಗಿದೆ : ಸಿ ಟಿ ರವಿ - BJP National General Secretary CT Ravi

ಸಲೀಂ-ಉಗ್ರಪ್ಪ ಅಷ್ಟು ದಡ್ಡರು ಎಂದು ನನಗೆ ಅನ್ನಿಸಲ್ಲ. ಗುಟ್ಟು ರಟ್ಟಾಗಲಿ ಎಂದೇ ರಟ್ಟು ಮಾಡಿದ್ದಾರೆ ಅನ್ಸತ್ತೆ. ಇದರ ಹಿಂದೆ ಖಂಡಿತ ವಿಪಕ್ಷ ನಾಯಕರ ಬುದ್ಧಿವಂತ ಮೆದುಳು ಕೆಲಸ ಮಾಡಿದೆ ಎಂದು ಸಿ ಟಿ ರವಿ ಹೇಳಿದ್ದಾರೆ..

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ
ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ

By

Published : Oct 13, 2021, 3:42 PM IST

ಚಿಕ್ಕಮಗಳೂರು :ಕಾಂಗ್ರೆಸ್ಸೆ ಹೀಗಿದೆ.. ತಿಪ್ಪೆ ಕೆದಕಿದಷ್ಟು ಹೊಲಸೇ ಹೊರ ಬರಲಿದೆ ಅಂತಾಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು

ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಡಿ ಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್​​ ಮುಖಂಡರಾದ ಸಲೀಂ ಹಾಗೂ ಉಗ್ರಪ್ಪನವರು ಮಾತನಾಡಿದ ವಿಚಾರ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದಾರೆ.

ಬರೀ ಡಿ ಕೆ ಶಿವಕುಮಾರ್ ಮಾತ್ರವಲ್ಲ, ಕೆದಿಕಿದರೆ ಇಡೀ ಕಾಂಗ್ರೆಸ್ ಪೂರ ಹೊಲಸೆ. ಸಲೀಂ-ಉಗ್ರಪ್ಪ ಸದಾ ಬೇರೆ ಪಕ್ಷದ ಬಗ್ಗೆ ಟೀಕೆ ಮಾಡುತ್ತಿದ್ರು. ಉಗ್ರಪ್ಪ-ಸಲೀಂ ಇಂದು ಗುಟ್ಟನ್ನ ರಟ್ಟು ಮಾಡಿದ್ದಾರೆ. ಕಳ್ಳನ ಹೆಂಡತಿ ಯಾವತ್ತಿದ್ರೂ ಡ್ಯಾಶ್...ಡ್ಯಾಶ್...ಡ್ಯಾಶ್. ಕಾಂಗ್ರೆಸ್ ನಾಯಕರ ಬಗ್ಗೆ ಅವರೇ ಗುಟ್ಟನ್ನ ರಟ್ಟು ಮಾಡಿದ್ದಾರೆ.

ಈ ಹಿಂದೆ ಜಿ.ಪರಮೇಶ್ವರರನ್ನ ಯಾವ ಶಕ್ತಿ ಸೋಲಿಸಿತ್ತೋ ಅದೇ ಶಕ್ತಿಯಿಂದ ನನಗೆ ಅಡ್ಡವಾಗಬಹುದೆಂದು ಗುಟ್ಟು ರಟ್ಟು ಮಾಡಿದ್ದಾರೆ. ಡಿ ಕೆ ಶಿವಕುಮಾರ್ ನನಗೆ ಅಡ್ಡ ಎಂದು ಅವರ ಬದಿಗೆ ಸರಿಸಬೇಕೆಂಬ ಸಂಚು ಸ್ಪಷ್ಟವಾಗಿದೆ.

ಸಲೀಂ-ಉಗ್ರಪ್ಪ ಅಷ್ಟು ದಡ್ಡರು ಎಂದು ನನಗೆ ಅನ್ನಿಸಲ್ಲ. ಗುಟ್ಟು ರಟ್ಟಾಗಲಿ ಎಂದೇ ರಟ್ಟು ಮಾಡಿದ್ದಾರೆ ಅನ್ಸತ್ತೆ. ಇದರ ಹಿಂದೆ ಖಂಡಿತ ವಿಪಕ್ಷ ನಾಯಕರ ಬುದ್ಧಿವಂತ ಮೆದುಳು ಕೆಲಸ ಮಾಡಿದೆ ಎಂದು ಸಿ ಟಿ ರವಿ ಹೇಳಿದ್ದಾರೆ.

ABOUT THE AUTHOR

...view details