ಚಿಕ್ಕಮಗಳೂರು:ಯಾರಿಗೆ ಹುಟ್ಟಿನ ಬಗ್ಗೆ ಅನುಮಾನವಿರುತ್ತೋ ಅವರು ಸಾವರ್ಕರ್ ಯಾರೆಂದು ಕೇಳುತ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು ವೀರ ಸಾವರ್ಕರ್. ಎರಡು ಜೀವವಾಧಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಸಾವರ್ಕರ್. ಅವರ ಬಗ್ಗೆ ಗೊತ್ತಿಲ್ಲದವರಿಗೆ ಇಂತಹ ಸಂಶಯವಾಗಿರುತ್ತೆ. ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನೆಹರೂ ನೂರಾರು ಫೋಟೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿವೆ. ಅಟಲ್ ಜೀ ಅವರದ್ದು, ಆ ರೀತಿ ಒಂದೇ ಒಂದು ತೋರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಅಟಲ್ ಜೀ ಬದುಕಿದ್ದಾಗಲೂ ವಿವಾದಕ್ಕೆ ಒಳಗಾಗಲಿಲ್ಲ. ಈಗ ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಹೆಸರು ಬಳಕೆ ಮಾಡುತ್ತಿದ್ದು, ನೆಹರೂ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಚಿತ್ರಗಳನ್ನ ಕಾಂಗ್ರೆಸ್ ಸಮರ್ಥಿಸುತ್ತಿದೆ ಎಂದರು.
ವಸ್ತುನಿಷ್ಠ ಸಮರ್ಥನೆಗೆ ವಿಷಯ ಇಲ್ಲದಾಗ ನಿಂದನೆಗೆ ಇಳಿಯುತ್ತಾರೆ. ಈಗ ಕಾಂಗ್ರೆಸ್ ಇಳಿದಿರುವುದು ನಿಂದನೆಗೆ, ಆ ನಿಂದನೆಗೆ ಎಲ್ಲರ ಹೆಸರು ಬಳಕೆ. ಈಗಿರುವುದು ಹಳೇ ಕಾಂಗ್ರೆಸ್ ಅಲ್ಲ, ಇಟಲಿ ಕಾಂಗ್ರೆಸ್ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.
ಸರದಿ ಸೋಲಿನಿಂದ ಕಾಂಗ್ರೆಸ್ಸಿಗರಿಗೆ ಹುಚ್ಚು ಹಿಡಿದಿದೆ:
ಸರದಿ ಸೋಲಿನಿಂದ ಕಾಂಗ್ರೆಸಿಗರಿಗೆ ಹುಚ್ಚು ಹಿಡಿದಿದೆ. ಕಾಂಗ್ರೆಸಿಗರ ಬಳಿ ಚರ್ಚೆಗೆ ಸರಕುಗಳಿಲ್ಲ. ಚರ್ಚೆಗೆ ವಿಷಯಗಳಿಲ್ಲದೇ ಕಾಂಗ್ರೆಸ್ನವರು ಏನೇನೋ ಮಾತಾನಾಡುತ್ತಿದ್ದಾರೆ. ಇಂದಿರಾಗಾಂಧಿ ದೊಡ್ಡವರು ಅಂತ ಅನ್ನಿಸೋದು ಕಾಂಗ್ರೆಸಿಗರಿಗೆ ಅಷ್ಟೆ. ಕಾಂಗ್ರೆಸಿಗರು ಮಾನಸಿಕ ಸ್ಥಿಮಿತದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಿಟಿ ರವಿ ಸಲಹೆ ನೀಡಿದ್ದಾರೆ.
ಓದಿ:ಸಿ.ಟಿ.ರವಿಗೆ ಯಾವ ಚರಿತ್ರೆ, ಇತಿಹಾಸ ಗೊತ್ತಿದೆ?: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ