ಕರ್ನಾಟಕ

karnataka

ETV Bharat / state

ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಬಿ.ವಿ.ಶ್ರೀನಿವಾಸ್ ಮಾದರಿ: ಸಿ.ಟಿ.ರವಿ ವ್ಯಂಗ್ಯ - BV Srinivas running

ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್​ ಮಾದರಿಯಾಗುತ್ತಾರೆ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

Bjp Mla CT ravi
ಬಿಜೆಪಿ ಶಾಸಕ ಸಿ.ಟಿ.ರವಿ

By

Published : Jun 14, 2022, 3:44 PM IST

ಚಿಕ್ಕಮಗಳೂರು:ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರಿಗೆ ಉಜ್ವಲವಾದ ಭವಿಷ್ಯವಿದೆ. ಆದರೆ ಅದು ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್​​ನಲ್ಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಟಾಂಗ್‌ ಕೊಟ್ಟರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೆಹಲಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಶ್ರೀನಿವಾಸ್​ ಓಡುವುದನ್ನು ನಾನು ನೋಡ್ತಿದ್ದೆ. ಕ್ಷಣಮಾತ್ರದಲ್ಲಿ ಮಿಂಚಿನ ಓಟಕಿತ್ತರು. ಯಾವುದಾದರೂ ಅಥ್ಲೆಟಿಕ್ಸ್​ಗೆ ಹೋದರೆ ಅವರಿಗೆ ಪ್ರಶಸ್ತಿ ಖಂಡಿತ ಎಂದು ಲೇವಡಿ ಮಾಡಿದರು.


ನಾನು ಚಳವಳಿಗಳನ್ನು ಮಾಡಿದ್ದಾನೆ. ಚಳವಳಿ ಮೂಲಕವೇ ಬಂದು ಜೈಲಿಗೆ ಹೋಗಿದ್ದೇನೆ. ಹತ್ತಾರು ಪೊಲೀಸ್ ಸ್ಟೇಷನ್​ಗಳಲ್ಲಿ ಓದೆ ತಿಂದಿದ್ದೇನೆ. ಆದರೆ, ಪೊಲೀಸರಿಗೆ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಕಳ್ಳರಿಗೆ ಶ್ರೀನಿವಾಸ್​ ಮಾದರಿ ಎಂದು ಇದೇ ವೇಳೆ ಕಾಲೆಳೆದರು.

ಇದನ್ನೂ ಓದಿ:ಪ್ರತಿಭಟನೆ ವೇಳೆ ಡಿಕೆ ಸುರೇಶ್​ ತಳ್ಳಿ ವ್ಯಾನ್ ಹತ್ತಿಸಿದ ಪೊಲೀಸರು

For All Latest Updates

ABOUT THE AUTHOR

...view details