ಕರ್ನಾಟಕ

karnataka

ETV Bharat / state

BJP ನಾಯಕರ ನೇತೃತ್ವದಲ್ಲಿ Covid ಮೃತದೇಹಗಳ ಚಿತಾಭಸ್ಮ ವಿಸರ್ಜನೆ

ಲಾಕ್​​ಡೌನ್ ಜಾರಿಯಾಗಿದ್ದ ಹಿನ್ನೆಲೆ ಸ್ಮಶಾನದಲ್ಲೇ ಉಳಿದಿದ್ದ ಕೋವಿಡ್ ಮೃತದೇಹಗಳ ಅಸ್ಥಿಯನ್ನ ಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ. 45 ಮೃತದೇಹಗಳ ಚಿತಾಭಸ್ಮವನ್ನು ಬಿಜೆಪಿ ಮುಖಂಡರು ವಿಸರ್ಜಿಸಿ ಮಾನವೀಯತೆ ಮೆರೆದಿದ್ದಾರೆ.

BJP Leaders immerses unclaimed and other ashes of coivd victims
ಬಿಜೆಪಿ ನಾಯಕರ ನೇತೃತ್ವದಲ್ಲಿ ಕೋವಿಡ್ ಮೃತದೇಹಗಳ ಅಸ್ಥಿ ವಿಸರ್ಜನೆ

By

Published : Jun 22, 2021, 7:24 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್​ ಮೃತದೇಹಗಳ ಅಂತ್ಯಸಂಸ್ಕಾರದ ಬಳಿಕ ಅಸ್ಥಿ ವಿಸರ್ಜನಾ ಕಾರ್ಯ ಅಂತಿಮವಾಗಿರಲಿಲ್ಲ. ಈ ಹಿನ್ನೆಲೆ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ಅಸ್ಥಿ ವಿಸರ್ಜನೆ ನೆರವೇರಿಸಲಾಗಿದೆ.

ಈ ಹಿಂದೆ ಕೊರೊನಾದಿಂದ ಮೃತಪಟ್ಟವರ ಅಸ್ಥಿ ವಿಸರ್ಜನೆಗೆ ಲಾಕ್​​ಡೌನ್​ ನಿಯಮ ಅಡ್ಡಿಯಾಗಿತ್ತು. ಅಲ್ಲದೇ ಕೆಲ ಅನಾಥ ಶವಗಳ ಅಸ್ಥಿ ಸೇರಿದಂತೆ, ಕುಟುಂಬಸ್ಥರು ಅಲ್ಲಿಯೇ ಬಿಟ್ಟು ಹೋಗಿದ್ದ ಅಸ್ಥಿಗಳನ್ನೂ ಸಹ ಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ. ಒಟ್ಟ 45 ಮೃತದೇಹಗಳ ಚಿತಾಭಸ್ಮವನ್ನು ಜಿಲ್ಲೆಯ ಎನ್​ಆರ್​ ಪುರ ತಾಲೂಕಿನ ಖಾಂಡ್ಯ ಬಳಿಯ ಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ.

ಬಿಜೆಪಿ ನಾಯಕರ ನೇತೃತ್ವದಲ್ಲಿ ಕೋವಿಡ್ ಮೃತದೇಹಗಳ ಚಿತಾಭಸ್ಮ ವಿಸರ್ಜನೆ

ಇದಕ್ಕೂ ಮೊದಲು ಖಾಂಡ್ಯ ಸಮೀಪದ ಮಾರ್ಕಂಡೇಶ್ವರ ದೇವಾಲಯ ಸಮೀಪ ಚಿತಾಭಸ್ಮಗಳಿಗೆ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಈ ವೇಳೆ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿ ಇತರ ಮುಖಂಡರು ಭಾಗಿಯಾಗಿದ್ದರು.

ABOUT THE AUTHOR

...view details