ಚಿಕ್ಕಮಗಳೂರು: ಕಾಂಗ್ರೆಸ್ಶಾಸಕ ಯು.ಟಿ.ಖಾದರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರೀಶ್ ಪಾಂಡೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಯು.ಟಿ.ಖಾದರ್ ಬಂಧಿಸುವಂತೆ ಬಿಜೆಪಿ ಮುಖಂಡರಿಂದ ಎಸ್ಪಿಗೆ ಮನವಿ - ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಕಾರಣ
ಮಂಗಳೂರಿನ ಪ್ರತಿಭಟನೆಯಲ್ಲಿ ಘರ್ಷಣೆಯುಂಟಾಗಿ ಇಬ್ಬರು ಮೃತಪಡಲು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಕಾರಣ. ಆದ್ದರಿಂದ ಅವರ ಮೇಲೆ ಈ ಕೂಡಲೇ ಕ್ರಿಮಿನಲ್ ಪ್ರಕರಣ ಹೂಡಿ ಬಂಧಿಸಬೇಕು ಎಂದು ಚಿಕ್ಕಮಗಳೂರು ಬಿಜೆಪಿ ಮುಖಂಡರು ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
![ಯು.ಟಿ.ಖಾದರ್ ಬಂಧಿಸುವಂತೆ ಬಿಜೆಪಿ ಮುಖಂಡರಿಂದ ಎಸ್ಪಿಗೆ ಮನವಿ appealing for the arrest of U.T.Khadar](https://etvbharatimages.akamaized.net/etvbharat/prod-images/768-512-5437523-thumbnail-3x2-vicky.jpg)
ಯು.ಟಿ.ಖಾದರ್ನನ್ನು ಬಂಧಿಸುವಂತೆ ಮನವಿ
ಶಾಸಕ ಯು.ಟಿ.ಖಾದರ್, ಪೌರತ್ವ ಕಾಯ್ದೆ ರಾಜ್ಯದಲ್ಲಿ ಜಾರಿಯಾದರೆ ಇಡೀ ರಾಜ್ಯವೆ ಹೊತ್ತಿ ಉರಿಯಲಿದೆ ಎಂದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ಮೂಲಕ ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ಖಾದರ್ ಅವರು ಉದ್ದೇಶ ಪೂರ್ವಕವಾಗಿ ಈ ಹೇಳಿಕೆ ನೀಡಿದ್ದು, ಅವರ ವಿರುದ್ದ ಐಪಿಸಿ ಸೆಕ್ಷನ್ 123ಎ, 153ಎ,153 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.