ಚಿಕ್ಕಮಗಳೂರು:ಬೆಳಗಾವಿಯಲ್ಲಿ ಗಲಾಟೆಯು ಅರಾಜಕತೆ ಹಾಗೂ ಮಹಾರಾಷ್ಟ್ರ ಕರ್ನಾಟಕ ನಡುವೆ ಸಂಘರ್ಷ ಹುಟ್ಟುಹಾಕಲು ನಡೆಸಿರುವ ಷಡ್ಯಂತ್ರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟರು, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ. ಅಲ್ಲಿಯ ಸರ್ಕಾರ ಕಾಂಗ್ರೆಸ್ ಸರ್ಕಾರದ ಪಾಲುದಾರರದ್ದು. ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನಿಸುವ ಕೆಲಸ ಮಾಡಿದ್ರು. ಇವ್ರ ಉದ್ದೇಶ ಸಂಘರ್ಷ ಆಗ್ಲಿ, ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ ಆಗ್ಲಿ ಅನ್ನೋದಾಗಿ ಎಂದು ಆರೋಪಿಸಿದ್ದಾರೆ.