ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶೃಂಗೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಕಾಫಿನಾಡಿನಲ್ಲಿ ಶೋಭಾ ಮತ ಪ್ರಚಾರ - undefined
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ರೋಡ್‌ಶೋ ಮೂಲಕ ಮತಯಾಚನೆ ಮಾಡಿದರು.
![ಕಾಫಿನಾಡಿನಲ್ಲಿ ಶೋಭಾ ಮತ ಪ್ರಚಾರ](https://etvbharatimages.akamaized.net/etvbharat/images/768-512-3001245-thumbnail-3x2-ckm.jpg)
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣ ಕಣ ರಂಗೇರುತ್ತಿದೆ. ಮತದಾನಕ್ಕೆ ಮೂರು ದಿನಗಳು ಬಾಕಿ ಇರುವಂತೆ ಅಭ್ಯರ್ಥಿಗಳು ಮನೆ,ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಜೊತೆಗೆ ರೋಡ್‌ಶೋ, ಬಹಿರಂಗ ಸಭೆಗಳಲ್ಲಿ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾ ಮತಪ್ರಭುವಿನ ಮನಸೆಳೆಯುತ್ತಿದ್ದಾರೆ.
ಇವತ್ತು ಶೃಂಗೇರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ, ಇಲ್ಲಿನ ಮನೆಗಳಿಗೆ ತೆರಳಿ, ಕೈ ಮುಗಿದು ಮತನೀಡುವಂತೆ ಕೋರಿದರು. ಬಾಳೆಹೊನ್ನೂರು, ಖಾಂಡ್ಯಾ, ಕೊಪ್ಪದಲ್ಲಿ ಮಿಂಚಿನ ಸಂಚಾರ ನಡೆಸಿದ ಅವರು,ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ನಿಟ್ಟಿನಲ್ಲಿ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು. ಇದೇ ವೇಳೆ, ಕೆಲವೆಡೆ ಅವರು ತುಳು ಭಾಷೆಯಲ್ಲೂ ಪ್ರಚಾರ ಮಾಡಿದ್ದು ವಿಶೇಷವಾಗಿತ್ತು.