ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮತ್ತೆ ಬೃಹತ್ ಗಾತ್ರದ ಕಾಡು ಕೋಣ ಕಾಣಿಸಿಕೊಂಡಿದೆ. ಮೂಡಿಗೆರೆ ತಾಲೂಕಿನ ಚೌಳಿಕೆರೆ ಕಾಫಿ ಎಸ್ವೇಟ್ ಬಳಿ ಇವತ್ತು ಕಾಣಿಸಿಕೊಂಡ ಕಾಡು ಕೋಣ ಚೌಳಿಕೆರೆ ಗ್ರಾಮದತ್ತ ಸಾಗುವ ಮುಖ್ಯ ರಸ್ತೆಯಲ್ಲೇ ರಾಜಾರೋಷವಾಗಿ ನಡೆದು ಬಂದಿದೆ. ಪ್ರತಿನಿತ್ಯ ಕಾಡುಕೋಣಗಳು ಮಲೆನಾಡು ಭಾಗದ ಗ್ರಾಮ ದತ್ತ ಧಾವಿಸಿ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮತ್ತೆ ಕಾಡುಕೋಣ ಪ್ರತ್ಯಕ್ಷ... ಭಯದ ನೆರಳಲ್ಲಿ ಮಲೆನಾಡಿನ ಜನ - Kannada news
ಮೂಡಿಗೆರೆ ತಾಲೂಕಿನ ಚೌಳಿಕೆರೆ ಕಾಫಿ ಎಸ್ವೇಟ್ ಬಳಿ ಬೆಳ್ಳಂ ಬೆಳಗ್ಗೆ ಗ್ರಾಮದತ್ತ ರಾಜಾರೋಷವಾಗಿ ಮುಖ್ಯ ದಾರಿಯಲ್ಲಿಯೇ ನಡೆದು ಬಂದಿದೆ.
ಕಾಡುಕೋಣ ಪ್ರತ್ಯಕ್ಷ
ಮಲೆನಾಡು ಭಾಗದಲ್ಲಿ ಜನರು ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಹಿಂದೇ ಮುಂದೆ ನೋಡುವಂತಹ ಸ್ಥಿತಿ ನಿರ್ಮಾಣ ಆಗುತ್ತಿದ್ದು, ಗ್ರಾಮದ ಬಳಿಯೇ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿರೋದು ಭಯ ಹುಟ್ಟಿಸುತ್ತಿದೆ. ಪದೇ ಪದೇ ಹೀಗೆ ಕಾಡು ಕೋಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಅನ್ನೋದು ಇವರ ಆರೋಪವಾಗಿದೆ.