ಚಿಕ್ಕಮಗಳೂರು :ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದಲ್ಲಿ ದಶರಥ ಪೂಜಾರ್ ಅವರು ಕಾರಣಿಕ ನುಡಿಗಳನ್ನಾಡಿದ್ದು, ಸರ್ವರೂ ಜಾಗೃತರಾಗಿರಬೇಕು ಎಂಬ ಸೂಚನೆ ದೊರೆತಿದೆ.
ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಭವಿಷ್ಯ ಸುಳ್ಳಾಗುವುದಿಲ್ಲ ಎಂಬ ಐತಿಹ್ಯವಿದೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಸಿಂಹಾಸನಕ್ಕೆ ಗಿಳಿಗಳು ಕುಟುಕಿದವು. ದಾನವರು ಮಾನವರಿಗೆ ಕಂಟಕವಾದರು. ರಾಮ ರಾಜ್ಯಕ್ಕೆ ಸರ್ವರೂ ಹೊಡೆದರು. ಸರ್ವರೂ ಎಚ್ಚರಿಕೆಯಿಂದಿರಬೇಕು ಎಂಬ ಪಂಚ ನುಡಿ ಭವಿಷ್ಯ ನುಡಿದಿದ್ದಾರೆ.