ಚಿಕ್ಕಮಗಳೂರು:ಜಿಲ್ಲಾ ಎಸ್ಪಿ ನಿವಾಸದ ಬಳಿಯೇ ಎರಡು ಪಕ್ಷಿಗಳು ಸತ್ತು ಬಿದ್ದಿದ್ದು, ಚಿಕ್ಕಮಗಳೂರು ಜಿಲ್ಲಾ ಜನರಲ್ಲಿ ಹಕ್ಕಿಜ್ವರದ ಆತಂಕ ಮನೆ ಮಾಡಿದೆ.
ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಬಳಿ ಸತ್ತು ಬಿದ್ದಿರುವ ಹಕ್ಕಿಗಳು: ಕಾಫಿ ನಾಡಲ್ಲಿ ಹಕ್ಕಿಜ್ವರದ ಆತಂಕ - ಹಕ್ಕಿಜ್ವರ
ಚಿಕ್ಕಮಗಳೂರಿನಲ್ಲಿ ಎಸ್ಪಿ ನಿವಾಸದ ಬಳಿಯೇ ಪಕ್ಷಿಗಳು ಸತ್ತು ಬಿದ್ದಿದ್ದು, ಜನರಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ.
ಚಿಕ್ಕಮಗಳೂರಿನಲ್ಲಿ ಹಕ್ಕಿಜ್ವರದ ಆತಂಕ
ಎರಡು ಮೈನಾ ಹಕ್ಕಿಗಳು ನಿತ್ರಾಣಗೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳ ಕಳೇಬರವನ್ನು ಲ್ಯಾಬ್‌ಗೆ ಕಳುಹಿಸಿ, ವರದಿ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ಪಿ ಮನೆಯ ಬಳಿಯೇ ಈ ಘಟನೆ ನಡೆದಿದೆ. ಹೀಗಾಗಿ ಕೊರೊನಾ,ಮಂಗನಕಾಯಿಲೆ ಜೊತೆಗೆ ಹಕ್ಕಿ ಜ್ವರದ ಆತಂಕ ಕೂಡ ಎದುರಾಗಿದೆ.
ಸ್ಥಳಕ್ಕೆ ಜಿಲ್ಲಾ ವಿಚಕ್ಷಣಾ ವೈದ್ಯಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.