ಚಿಕ್ಕಮಗಳೂರು:ಭೈರತಿ ಬಸವರಾಜು ಅವರು ಆಗರ್ಭ ಶ್ರೀಮಂತರಲ್ಲಿ ಒಬ್ಬರು. ಅವರದ್ದೇ ನೂರಾರು ಎಕರೆ ಜಮೀನಿದೆ. 15 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಬೇಕಾದ ದುಸ್ಥಿತಿ ಅವರಿಗೆ ಬಂದಿಲ್ಲ. ಯಾರ ಮೇಲೆ ಬೇಕಾದರೂ ತನಿಖೆ ಮಾಡಬಹುದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
15 ಲಕ್ಷಕ್ಕೆ ಕೈಚಾಚುವ ದುಸ್ಥಿತಿ ಸಚಿವ ಭೈರತಿ ಬಸವರಾಜು ಅವರಿಗೆ ಬಂದಿಲ್ಲ: ಸಿ ಟಿ ರವಿ - ಯಾರೂ ಕಾಂಗ್ರೆಸ್ಗೆ ವೋಟ್ ಹಾಕಬೇಡಿ
ಸತೀಶ್ ಜಾರಕಿಹೊಳಿಗೆ ಹಿಂದೂಗಳ ಸಾಮರ್ಥ್ಯ ಏನು ಎಂಬುದನ್ನು ತೋರಿಸಬೇಕು. ಅದಕ್ಕೆ ಹಿಂದೂ ಎಂದು ಗುರುತಿಸಿಕೊಂಡಿರುವವರು ಯಾರೂ ಕಾಂಗ್ರೆಸ್ಗೆ ವೋಟ್ ಹಾಕಬೇಡಿ ಎಂದು ಸಿ ಟಿ ರವಿ ತಿರುಗೇಟು ಕೊಟ್ಟರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ
ಹಿಂದೂ ಎಂದು ಯಾರು ತಮ್ಮನ್ನು ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರೋ ಅವರು ಕಾಂಗ್ರೆಸ್ಗೆ ವೋಟ್ ಹಾಕಬಾರದು. ಸತೀಶ್ ಜಾರಕಿಹೊಳಿ ಹಾಗೂ ಅವರ ಪಾರ್ಟಿಗೆ ಹಿಂದೂ ಸಾಮರ್ಥ್ಯ ಏನು ಅಂತ ತೋರಿಸಬೇಕು ಎಂದರು. ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ ಮತ್ತು ಮರಾಠ ಸಮುದಾಯ, ವಿಜಯನಗರದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದ ನಾಯಕ ಸಮುದಾಯ ಹಾಗು ಅವರು ಹುಟ್ಟಿದ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಸತೀಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ