ಕರ್ನಾಟಕ

karnataka

ETV Bharat / state

ಮಂದ ಬೆಳಕು: ಡಿಕೆಶಿ ಕುಟುಂಬಸ್ಥರ ಹೆಲಿಕಾಪ್ಟರ್ ಪ್ರಯಾಣ ರದ್ದು - Latest News For DKS In Chikkamagalur

ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್​ಗೆ ಸಮಸ್ಯೆಯಾಗಬಹುದು ಎಂದು ಹೆಲಿಕಾಪ್ಟರ್​ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ

By

Published : Nov 19, 2019, 8:30 PM IST

ಚಿಕ್ಕಮಗಳೂರು: ನಗರದ ಶೃಂಗೇರಿ ಶಾರದ ಪೀಠಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಪೂಜೆ ಮುಗಿಸಿ ವಾಪಾಸ್ ತೆರಳುವಾಗ ಸಮಯಕ್ಕೆ ಸರಿಯಾಗಿ ಹೆಲಿಪ್ಯಾಡ್​ಗೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆಯಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಸಮಸೈಯಾಗಬಹುದು ಎಂದು ಹೆಲಿಕಾಪ್ಟರ್​ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ

4 ಗಂಟೆಗೆ ಶೃಂಗೇರಿಯಿಂದ ಡಿ.ಕೆ.ಶಿ ಹಾಗೂ ಅವರ ಕುಟುಂಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದೇವಸ್ಥಾನದಲ್ಲಿ ಕಾರ್ಯಕರ್ತರು ಹಾಗೂ ಭಕ್ತರು ಸೆಲ್ಫಿಗೆ ಮುಗಿಬಿದ್ದ ಕಾರಣ ಹೆಲಿಪ್ಯಾಡ್​ಗೆ ಡಿಕೆಶಿ, ಕುಟುಂಬಸ್ಥರು ತಡವಾಗಿ ಆಗಿಮಿಸಿದ್ದರು. ಇದರಿಂದ ಬೆಂಗಳೂರ ತೆರಳುವ ಮಾರ್ಗ ಮಧ್ಯೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆ ಹೆಲಿಕಾಪ್ಟರ್ ಪ್ರಯಾಣವನ್ನು ಸಿಬ್ಬಂದಿ ರದ್ದುಗೊಳಿಸಿದ್ದಾರೆ.

ಇದರಿಂದಾಗಿ ಡಿಕೆಶಿ ಕುಟುಂಬಸ್ಥರು ಮಂಗಳೂರಿನಿಂದ ರಾತ್ರಿ 9 ಗಂಟೆಯ ನಂತರ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.

ABOUT THE AUTHOR

...view details