ಕರ್ನಾಟಕ

karnataka

ETV Bharat / state

25 ನೇ ವಯಸ್ಸಿಗೆ ಕಡಲ ದಾಟಿ ಉಪಗ್ರಹ ಹಾರಿಸಿದ ಕನ್ನಡಿಗ.. ಅಮೆರಿಕದಲ್ಲಿ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಭಾಗಿ - ಏರೋಸ್ಪೆಸ್ ಪಿಕ್ಸಲ್

ಇಷ್ಟು ಸಣ್ಣ ವಯಸ್ಸಿನಲ್ಲೇ ಈ ಯುವಕ ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹ ತಯಾರಿಕಾ ಕಂಪೆನಿಯ ಮಾಲೀಕನೂ ಆಗಿದ್ದಾನೆ

Avez
ಸಾಧಕ ಯುವಕ ಆವೇಜ್​

By

Published : Jun 22, 2023, 7:05 PM IST

Updated : Jun 22, 2023, 9:17 PM IST

ಆವೇಜ್​ ಬಗ್ಗೆ ತಂದೆಯ ಹೆಮ್ಮೆಯ ಮಾತುಗಳು

ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನ ಪುಟ್ಟ ಗ್ರಾಮ ಆಲ್ದೂರಿನ ಯುವಕ ಆವೇಜ್ ಅಹಮದ್​ ತನ್ನ 25ನೇ ವಯಸ್ಸಿಗೆ ಪ್ರಪಂಚವೇ ಭಾರತದೆಡೆ ನೋಡುವಂತಹ ಸಾಧನೆ ಮಾಡಿದ್ದು, ಅಮೆರಿಕಾದ ನೆಲದಿಂದ ಉಪಗ್ರಹವೊಂದನ್ನು ಉಡಾವಣೆ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾನೆ. ಈತನ ಸಾಧನೆಯನ್ನು ಗುರುತಿಸಿ ಅಮೆರಿಕಾದಲ್ಲಿ ನಡೆಯುತ್ತಿರುವ ಮೋದಿ ಅರೈವಲ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಸಾಧಕ ಕನ್ನಡದ ಯುವಕನಿಗೂ ವೈಟ್​ ಹೌಸ್​ನಿಂದ ಆಹ್ವಾನ ನೀಡಲಾಗಿದೆ.

ಸದ್ಯ ಅಮೆರಿಕಾದ ವೈಟ್​ ಹೌಸ್​ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಆವೇಜ್​ ಅಹಮದ್​ ಅಮೆರಿಕಾದ ಅಧ್ಯಕ್ಷ, ಭಾರತದ ಪ್ರಧಾನಿ ಮೋದಿ ಹಾಗೂ ಇನ್ನಿತರ ಗಣ್ಯರ ಜೊತೆಗೆ ಯುವ ವಿಜ್ಞಾನಿ ಆವೇಜ್​ ಅಹಮದ್​ ಕೂಡ ಭಾಗವಹಿಸಿದ್ದಾನೆ. 25ನೇ ವಯಸ್ಸಿನಲ್ಲಿ ಅಮೆರಿಕದ ಸ್ಪೇಸ್ ಎಕ್ಸ್​ನಿಂದ ಶಕುಂತಲಾ ಎಂಬ ಉಪಗ್ರಹವೊಂದನ್ನು ಆವೇಜ್​ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾರೆ. ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ, ತಮ್ಮ ತಂದೆ ತಾಯಿಗೂ ಆವೇಜ್ ಈ ಮೂಲಕ ಗೌರವ ತಂದು ಕೊಟ್ಟಿದ್ದಾರೆ.

ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಮಗ ಭಾಗವಹಿಸುತ್ತಿರುವುದರ ಬಗ್ಗೆ ಆವೇಜ್​ ಅಹಮ್ಮದ್​ ಪೋಷಕರು ಆನಂದ ವ್ಯಕ್ತಪಡಿಸಿದ್ದಾರೆ. ಆವೇಜ್​ ತಂದೆ ನದೀಮ್ ಅಹಮದ್ ಈ ಬಗ್ಗೆ ಮಾತನಾಡಿದ್ದು, "ನಮ್ಮ ಮಗನನ್ನು ಅಮೆರಿಕಾದ ವೈಟ್​ ಹೌಸ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಟ್​ ಹೌಸ್​ ನಿಂದ ಆಹ್ವಾನ ನೀಡಿದ್ದಾರೆ. ನಮ್ಮ ಪ್ರಧಾನಿ ಮೋದಿ ಅವರು ಅಮೆರಿಕಾಗೆ ತೆರಳಿದ್ದು, ಅವರಿಗೆ ಅಲ್ಲಿ ಅರೈವಲ್​ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಇಡೀ ಪ್ರಪಂಚದಿಂದ ನಿಗದಿತ ವಿಐಪಿಗಳು, ಅತಿಥಿಗಳಿಗೆ ಮಾತ್ರ ಭಾಗವಹಿಸಲು ಕರೆದಿದ್ದಾರೆ. ಆ ಲಿಮಿಟೆಡ್​ ಅತಿಥಿಗಳಲ್ಲಿ ನಮ್ಮ ಮಗ ಕೂಡ ಒಬ್ಬನಾಗಿರುವುದು. ಆತನ ಸಾಧನೆಯನ್ನು ನೋಡಿ ಅಲ್ಲಿಗೆ ಕರೆದಿದ್ದಾರೆ ಎನ್ನುವುದೇ ನಮಗೆ ನಮಗೆ ಬಹಳ ಹೆಮ್ಮೆಯ ವಿಷಯ."

"ನಮ್ಮ ಮಗ ವಿಜ್ಞಾನಿ. ಆತ ಪ್ರಪಂಚದ ಮೊದಲನೇ ಹೈಪರ್​ ಸ್ಪೆಕ್ಟ್ರಲ್​ ಉಪಗ್ರಹವನ್ನು ಮಾಡಿ ಅಮೆರಿಕಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾನೆ. ಉಪಗ್ರಹ ಚಿತ್ರಗಳೆಲ್ಲ ಚಿನ್ನಾಗಿ ಬರುತ್ತಿದೆ. ಅದೆಲ್ಲವನ್ನು ನೋಡಿ, ನಮ್ಮ ಮಗನಿಗೆ ಆಹ್ವಾನ ನೀಡಿದ್ದಾರೆ. ಅಮೆರಿಕಾದ ಅಧ್ಯಕ್ಷರು, ನಮ್ಮ ಪ್ರಧಾನಿ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಇತರ ಗಣ್ಯರ ಜೊತೆಗೆ ನಮ್ಮ ಮಗನೂ ಭಾಗವಹಿಸುತ್ತಿದ್ದಾನೆ." ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಯುವಕನಾದ ಆವೇಜ್​ ಅವರು ತಯಾರಿಸಿದಂತಹ ಉಪಗ್ರಹ 'ಶಕುಂತಲಾ' ಬೇರೆಲ್ಲಾ ಉಪಗ್ರಹಗಳಿಗಿಂತ ಶೇಕಡಾ 50 ಕ್ಕಿಂತ ಹೆಚ್ಚು ಡೇಟಾವನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭೂಮಿಯ ಚಲನವಲನದ ಚಿತ್ರಗಳು, ಕೃಷಿ ಪ್ರಗತಿ ಬಗ್ಗೆ, ಹವಾಮಾನದ ಕುರಿತು ಮಾಹಿತಿ ಸೇರಿದಂತೆ ಬೇರೆ ಬೇರೆ ರೀತಿಯ ಮಾಹಿತಿಗಳನ್ನು ಈ ಉಪಗ್ರಹ ರವಾನಿಸುತ್ತದೆ.

ಆಲ್ದೂರಿನಲ್ಲಿ ಮೆಡಿಕಲ್​ ಸ್ಟೋರ್​ ಇಟ್ಟುಕೊಂಡಿರುವ ಆವೇಜ್​ ಅವರ ತಂದೆ ಯಾವತ್ತೂ ಮಗನನ್ನು ಇದನ್ನೇ ಓದು ಎಂದು ಒತ್ತಡ ಹೇರಿದ್ದಿಲ್ಲ. ನಿನಗೆ ಯಾವುದು ಬೇಕೋ ಅದನ್ನೇ ಓದು ಎನ್ನುವ ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ಆಸ್ವಾತಂತ್ರ್ಯವನ್ನು ಯಾವತ್ತೂ ದುರುಪಯೋಗ ಮಾಡಿಕೊಳ್ಳದ ಮಗ ಆವೇಜ್​ ಇಂದು ಇಡೀ ಪ್ರಪಂಚವೇ ಭಾರತದ ಬಗ್ಗೆ ಮಾತ್ರವಲ್ಲದೆ ಅವರ ಪೋಷಕರ ಬಗ್ಗೆ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಪಿಲಾನಿ, ಗೋವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಆವೇಜ್​ ಅವರು ಇಂದು ಏರೋಸ್ಪೇಸ್​ ಪಿಕಸ್ಎಲ್​ ಎನ್ನುವ ತಮ್ಮದೇ ಆದ ಉಪಗ್ರಹ ತಯಾರಿಕಾ ಕಂಪೆನಿಯನ್ನೂ ಪ್ರಾರಂಭಿಸಿದ್ದಾರೆ.

ಯುವ ವಿಜ್ಞಾನಿಯ ಜೊತೆ ರಷ್ಯಾ ಸೇರಿದಂತೆ ಕೆಲವು ದೇಶಗಳ ಉಪಗ್ರಹ ಉಡಾವಣೆಯ ಕುರಿತು ಮಾತುಕತೆ ನಡೆಸಿದ್ದಾರೆ. ಆದರೆ ಈ ಹಿಂದೆಯೇ ಆವೇಜ್​ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ತನ್ನ ಕನಸಿನ ಯೋಜನೆಯ ಬಗ್ಗೆ ಮಾತುಕತೆ ನಡೆಸಿದ್ದು, ಇಂದು ನಡೆಯುತ್ತಿರುವ ಮೋದಿ ಅರೈವಲ್​ ಕಾರ್ಯಕ್ರಮದಲ್ಲಿ ಆವೇಜ್​ ಕನಸು ನನಸಾಗುವ ಹಾದಿ ತೆರೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಹರಿಹರದ ಬಡ ಪ್ರತಿಭೆ ಭೂಮಿಕಾ!

Last Updated : Jun 22, 2023, 9:17 PM IST

ABOUT THE AUTHOR

...view details