ಚಿಕ್ಕಮಗಳೂರು :ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಕಂದಾಯ ಇಲಾಖೆಯ ನಾಡ ಕಚೇರಿಯ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ನಾಡ ಕಚೇರಿ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ.. ಬರಿಗೈಯಲ್ಲಿ ವಾಪಸ್ಸಾದ ಖದೀಮರು - Jaipur revenue department
ಬೆಳಗ್ಗೆ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಕಳ್ಳತನಕ್ಕೆ ಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ..
ನಾಡಾ ಕಚೇರಿ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ..ಬರಿಗೈಯಲ್ಲಿ ವಾಪಾಸ್ಸಾದ ಖದೀಮರು
ಜಯಪುರ ನಗರದ ಮಧ್ಯೆ ಭಾಗದಲ್ಲಿರುವ ನಾಡ ಕಚೇರಿಗೆ ರಾತ್ರಿ ನುಗ್ಗಿದ ಕಳ್ಳರು, ಮೂರು ಬಾಗಿಲುಗಳ ಬೀಗ ಮುರಿದು ಒಳ ಹೋಗಿದ್ದಾರೆ. ಆದರೆ, ಕಚೇರಿಯೊಳಗೆ ಯಾವುದೇ ಬೆಲೆಬಾಳುವ ವಸ್ತುಗಳ ಸಿಗದೇ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.
ಬೆಳಗ್ಗೆ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಕಳ್ಳತನಕ್ಕೆ ಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.