ಚಿಕ್ಕಮಗಳೂರು :ನಗರದಲ್ಲಿ ಈಗಾಗಲೇ ಅಕ್ರಮ ಗೋ ಮಾಂಸ ಮಾರಾಟ ಮಾಡುವ ಅಡ್ಡೆಗಳ ಮೇಲೆ ನಗರಸಭೆ ದಾಳಿ ಮಾಡಿ ಖಡಕ್ ಸೂಚನೆ ನೀಡಿದೆ. ಆದರೂ ಕೆಲವರು ಎಚ್ಚೆತ್ತುಕೊಳ್ಳದ ಹಿನ್ನೆಲೆ, ಈಗ ಮತ್ತೆ ಆ ದಂಧೆ ನಡೆಯುತ್ತಿದ್ದ ಅಡ್ಡ ಮೇಲೆ ನಗರಸಭೆ ಸಿಬ್ಬಂದಿ ದಾಳಿ ಮಾಡಿದ್ದಾರೆ.
ನಗರದ ತಮಿಳು ಕಾಲೋನಿಯಲ್ಲಿ ಗೋ ಮಾಂಸ ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ಹಾಗೂ ನಗರಸಭೆಯ ಸಹಯೋಗದೊಂದಿಗೆ ದಾಳಿ ನಡೆಸಲಾಯಿತು. ದಾಳಿ ವೇಳೆ ಮಾರಾಟ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.