ಚಿಕ್ಕಮಗಳೂರು: 9 ಲಕ್ಷ ಮುಂಗಡ ನೀಡಿದ್ದ ಹಣ ವಾಪಸ್ ಕೊಡದ ಹಿನ್ನಲೆ ತೋಟದ ಮಾಲೀಕ, ಕಾರ್ಮಿಕರನ್ನ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ನಡೆದಿದೆ.
ಕಾಫಿ ತೋಟದ ಕೆಲಸಕ್ಕೆ ಸೇರುವಾಗ ಕಾರ್ಮಿಕರಿಗೆ ಮುಂಗಡವಾಗಿ ಮಾಲೀಕ 9 ಲಕ್ಷ ಹಣ ನೀಡಿದ್ದ. ಕಾರ್ಮಿಕರು ಬೇರೆಡೆ ಕೆಲಸಕ್ಕೆ ಹೋಗುತ್ತೇವೆ ಎಂದಾಗ ತೋಟದ ಮಾಲೀಕ ಹಣ ವಾಪಸ್ ಕೇಳಿದ್ದಾನೆ. ಸಮಯ ನೀಡಿ ಹಣ ಕಟ್ಟಿ ಹೋಗುತ್ತೇವೆ ಎಂದರೂ ಕಾರ್ಮಿಕರ ಮೇಲೆ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.