ಚಿಕ್ಕಮಗಳೂರು: ದಲಿತ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಫಿ ಬೆಳೆಗಾರರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಉದ್ದಿಮೆದಾರರಿದ್ದಾರೆ. ಒಂದೂವರೆ ಲಕ್ಷದಷ್ಟು ಕಾರ್ಮಿಕರಿದ್ದು, ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೂಡ ಲಕ್ಷಕ್ಕಿಂತ ಹೆಚ್ಚಿದ್ದಾರೆ. ಎಲ್ಲ ಮಾಲೀಕರು ಹಾಗೂ ಕಾರ್ಮಿಕರ ಸಂಬಂಧ ಅತ್ಯುತ್ತಮವಾಗಿತ್ತು. ಬಾಳೆಹೊನ್ನೂರು ಸಮೀಪದ ಜೇನುಗದ್ದೆ ಕಾಫಿತೋಟದಲ್ಲಿ ನಡೆದ ಘಟನೆ ಆಕಸ್ಮಿಕ. ಚಿತಾವಣೆ ಮಾಡುವವರೇ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಈ 14 ಜನ ತೋಟಕ್ಕೆ ಬಂದು 4 ತಿಂಗಳಾಗಿದೆ. ಮಾಲೀಕರಿಂದ 9 ಲಕ್ಷ ಮುಂಗಡವಾಗಿ ಹಣ ಪಡೆದಿದ್ದಾರೆ. ಕೆಲಸಕ್ಕೂ ಬರದೆ, ಹಣವನ್ನೂ ನೀಡದೆ ಇದ್ದರೆ ಮಾಲೀಕರು ತೋಟ ಉಳಿಸಿಕೊಳ್ಳುವುದು ಹೇಗೆ?. ಹಣವನ್ನೂ ಪಡೆದು ಕೆಲಸಕ್ಕೂ ಬರಲ್ಲ ಎಂದರೆ ಹೇಗೆ ಎಂದು ಕಾಫಿ ಬೆಳೆಗಾರರು ಪ್ರಶ್ನಿಸಿದ್ದಾರೆ.