ಚಿಕ್ಕಮಗಳೂರು: ಬೈಕ್ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವಚಿತ್ರಕ್ಕೆ ಅಸ್ಸಾಂ ಮೂಲದ ಯುವಕನೊಬ್ಬ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದಲ್ಲಿ ನಡೆದಿದೆ.
ಶಿವಾಜಿ ಭಾವಚಿತ್ರಕ್ಕೆ ಅವಮಾನ ಆರೋಪ: ಯುವಕನಿಗೆ ಸ್ಥಳೀಯರಿಂದ ಥಳಿತ - ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡಿದ ಅಸ್ಸಾಂ ಯುವಕ
ಬೈಕ್ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವಚಿತ್ರಕ್ಕೆ ಅಸ್ಸಾಂ ಮೂಲದ ಯುವಕನೊಬ್ಬ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದಲ್ಲಿ ನಡೆದಿದೆ.
![ಶಿವಾಜಿ ಭಾವಚಿತ್ರಕ್ಕೆ ಅವಮಾನ ಆರೋಪ: ಯುವಕನಿಗೆ ಸ್ಥಳೀಯರಿಂದ ಥಳಿತ](https://etvbharatimages.akamaized.net/etvbharat/prod-images/768-512-4746825-thumbnail-3x2-lek.jpg)
ಅಸ್ಸಾಂ ಯುವಕನಿಗೆ ಸ್ಥಳೀಯರಿಂದ ಥಳಿತ
ಅಸ್ಸಾಂ ಯುವಕನಿಗೆ ಸ್ಥಳೀಯರಿಂದ ಥಳಿತ
ಕಾಫಿ ತೋಟದ ಕೆಲಸಕ್ಕೆ ಬಂದಿರುವ ಅಸ್ಸಾಂ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಅಸ್ಸಾಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಶಿವಾಜಿ ಭಾವಚಿತ್ರಕ್ಕೆ ನಮಸ್ಕಾರ ಮಾಡಿಸಿ, ಮಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸು ಎಂದು ಹೇಳಿ ಕಳಿಸಿದ್ದಾರೆ.