ಕರ್ನಾಟಕ

karnataka

ETV Bharat / state

ಪಕ್ಷಕ್ಕಾಗಿ ದುಡಿದವರು ಎಂಎಲ್​ಸಿ ಟಿಕೆಟ್​ ಕೇಳುವುದು ಸಹಜ: ಎಸ್​.ಟಿ. ಸೋಮಶೇಖರ್​​

ವಿಧಾನ ಪರಿಷತ್​ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಹಲವು ಮುಖಂಡರು ಟಿಕೆಟ್​ ಕೇಳುತ್ತಿದ್ದಾರೆ. ಅವರು ಎಂಎಲ್​ಸಿ ಟಿಕೆಟ್​​ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ, ಪಕ್ಷಕ್ಕಾಗಿ ದುಡಿದವರು ಸಹಜವಾಗಿ ಕೇಳುತ್ತಾರೆ. ಟಿಕೆಟ್​ ಕೊಡುವುದು ಬಿಡುವುದು ನಂತರದ ವಿಷಯ ಎಂದು ಸಚಿವ ಎಸ್​​.ಟಿ. ಸೋಮಶೇಖರ್​ ಹೇಳಿದ್ದಾರೆ.

By

Published : Jun 2, 2020, 2:35 PM IST

ST Somashekhar
ಎಸ್​.ಟಿ.ಸೋಮಶೇಖರ್​​

ಚಿಕ್ಕಮಗಳೂರು:ವಿಧಾನಪರಿಷತ್ ಚುನಾವಣೆ ಸಮೀಪವಾಗಿದ್ದು, ಇದರಲ್ಲಿ ಬಿಜೆಪಿಗೆ 9 ಸ್ಥಾನ ಲಭ್ಯವಾಗಲಿದೆ. ಪಕ್ಷಕ್ಕೆ ದುಡಿದವರ ಪರವಾಗಿ ಶಾಸಕರು ಟಿಕೆಟ್​ ಕೇಳುವುದು ಸಹಜ ಪ್ರಕ್ರಿಯೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಸೋಮಶೇಖರ್​, ಜಾತಿ, ಸಮುದಾಯ ಹಾಗೂ ಪಕ್ಷಕ್ಕಾಗಿ ದುಡಿದವರು ಎಂಎಲ್ಎ ಹಾಗೂ ಎಂಪಿ ಗಳ ಮೂಲಕ ನಮಗೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ, ರಾಜ್ಯಸಭೆಗೆ ಕಳುಹಿಸಿ ಎಂದು ಕೇಳುವುದು ಸಹಜ. ಇದು ನಮ್ಮ ಪಕ್ಷದಲ್ಲಿ ಮಾತ್ರ ಅಲ್ಲ, ಎಲ್ಲಾ ಪಕ್ಷದಲ್ಲಿಯೂ ಇದೆ. ಇಂದು ಬೆಳಗ್ಗೆಯಿಂದ ಸಚಿವ ಸಿ.ಟಿ. ರವಿ ಅವರಿಗೂ ಕೆಲವರು ಫೋನ್​ ಮಾಡಿ ಮನವಿ ಮಾಡಿದ್ದಾರೆ. ಅದರಂತೆ ನಮ್ಮ ಬಳಿಯೂ ಸಹ ಕೆಲವರು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿ ಎಂಎಲ್​​ಸಿ ಹಾಗೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಸಿ ಎಂದು ಕೇಳುತ್ತಿದ್ದಾರೆ.

ವಿಧಾನ ಪರಿಷತ್​ ಟಿಕೆಟ್​ ಕೇಳುವ ಅಧಿಕಾರ ಎಲ್ಲರಿಗೂ ಇದೆ. ಎಸ್​.ಟಿ. ಸೋಮಶೇಖರ್​​

ನಮ್ಮನ್ನು ಎಂಎಲ್​ಸಿ ಮಾಡಿ ಎಂದು ಕೇಳುವ ಅಧಿಕಾರ ಎಲ್ಲರಿಗೂ ಇದೆ. ಪ್ರಯತ್ನ ಪಡುವುದರಲ್ಲಿ ಯಾವ ತಪ್ಪೂ ಇಲ್ಲ. ಈಗಾಗಲೇ ಆರ್. ಶಂಕರ್, ಎಂ ಟಿ ಬಿ ನಾಗರಾಜ್, ವಿಶ್ವನಾಥ್ ಇವರೆಲ್ಲರೂ ಇದ್ದಾರೆ. ಇವರೆಲ್ಲರಿಗೂ ಮುಖ್ಯಮಂತ್ರಿ ಮಾತು ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಮಾತು ತಪ್ಪುವುದಿಲ್ಲ. ಈ ಬಗ್ಗೆ ತೀರ್ಮಾನ ಅವರಿಗೇ ಬಿಟ್ಟಿದ್ದು ಎಂದು ಸೋಮಶೇಖರ್​ ತಿಳಿಸಿದರು.

ಈ ಸಂದರ್ಭದಲ್ಲಿ ಬೇರೆ ಪಕ್ಷದಿಂದ, ಬಿಜೆಪಿಗೆ ಶಾಸಕರು ಬರುವ ಅವಶ್ಯಕತೆ ಇಲ್ಲ. ಬಿಜೆಪಿಗೆ ಸಂಪೂರ್ಣವಾದ ಬಹುಮತವಿದೆ. ಸಚಿವ ರಮೇಶ್ ಜಾರಕಿಹೊಳಿಗೆ ಬೇರೆ ಪಕ್ಷದ ಶಾಸಕರ ಸಂಪರ್ಕ ಇರಬಹುದು. ಅವರು ಕೂಡ ಒಂದು ವರ್ಷದಿಂದ ಅದೇ ಸಂಪರ್ಕದಲ್ಲಿದ್ದರು. ನನ್ನ ಜವಾಬ್ದಾರಿ, ನನ್ನ ಕೆಲಸವನ್ನು ಮಾತ್ರ ನಾನು ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಸಚಿವ ಸೋಮಶೇಖರ್​ ಹೇಳಿದ್ರು.

ABOUT THE AUTHOR

...view details