ಚಿಕ್ಕಮಗಳೂರು:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್ಐ ಆಗಿ ನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದುತ್ತಿರುವ ಮಹೇಂದ್ರಪ್ಪನವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡಲಾಯಿತು.
ಎಸ್ಐ ನಿವೃತ್ತಿ : ಗೌರವಪೂರ್ವಕವಾಗಿ ಬೀಳ್ಕೊಟ್ಟ ಸಿಬ್ಬಂದಿ - ಚಿಕ್ಕಮಗಳೂರು ಎಸ್ಐ ನಿವೃತ್ತಿ ಸುದ್ದಿ
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್ಐ ಆಗಿ ನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದುತ್ತಿರುವ ಮಹೇಂದ್ರಪ್ಪನವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡಲಾಯಿತು.

ಠಾಣೆಯಲ್ಲಿ ಎಎಸ್ಐ ಮಹೇಂದ್ರಪ್ಪನವರಿಗೆ ಆತ್ಮೀಯವಾಗಿ ಠಾಣಾ ಸಿಬ್ಬಂಧಿಗಳು ಸನ್ಮಾನಿಸಿ ಗೌರವ ಸಲ್ಲಿಸಿ ವಿಶೇಷ ಉಡುಗೂರೆಯನ್ನು ನೀಡಿ, ಅತ್ಯಂತ ಗೌರವ ಪೂರ್ವಕವಾಗಿ ಬೀಳ್ಕೊಡುಗೆ ನೀಡಿದ್ದಾರೆ.
ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸಲೀಂ ಅವರೇ ಖುದ್ದಾಗಿ ಮಹೇಂದ್ರಪ್ಪ ಅವರನ್ನು ಠಾಣೆಯಿಂದ ಹೊರ ಕರೆದುಕೊಂಡು ಬಂದು ಜೀಪಿನಲ್ಲಿ ಕೂರಿಸಿದರು. ಸರ್ಕಲ್ ಇನ್ಸಪೆಕ್ಟರ್ ಜೀಪ್ ಚಾಲಕರಾಗಿ ಮಹೇಂದ್ರಪ್ಪ ಅವರನ್ನು ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿರುವ ಪೊಲೀಸ್ ಕಾಲೋನಿಗೆ ಬಿಟ್ಟು ಬಂದರು. ಈ ಮೂಲಕ ಕಳೆದ 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದೂ ನಿವೃತ್ತಿ ಹೊಂದುತ್ತಿರೋದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.