ಚಿಕ್ಕಮಗಳೂರು :ಶರತ್ ಬಚ್ಚೇಗೌಡರವರು ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ನೀಡಿರುವ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾತುಕತೆ ಮೂಲಕ ಶರತ್ ಬಚ್ಚೇಗೌಡ ಮನವೊಲಿಸುತ್ತೇನೆ, ಇಲ್ಲಿ ಏನೂ ಸಮಸ್ಯೆ ಇಲ್ಲ: ಅಶ್ವತ್ಥ್ ನಾರಯಣ್ - ಶರತ್ ಬಚ್ಚೇಗೌಡ ನ್ಯೂಸ್
ಶರತ್ ಬಚ್ಚೇಗೌಡರವರು ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ನೀಡಿರುವ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೀವಿ. ವಿಧಾನಸಭಾ ಚುನಾವಣೆ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದರು.
ಶರತ್ ಬಚ್ಚೇಗೌಡರ ಜೊತೆಗೆ ಮಾತನಾಡುತ್ತೇವೆ. ಅವರೆಲ್ಲರೂ ನಮ್ಮವರು. ಮಾತಿನ ಮೂಲಕ ಒಲಿಸಿಕೊಳ್ಳುತ್ತೇವೆ. ನನಗೆ ಅಂತಹ ಸಮಸ್ಯೆ ಏನೂ ಕಾಣಿಸುತ್ತಿಲ್ಲ. ಅವರ ಪಕ್ಷೇತರರಾಗಿ ನಿಲ್ಲುವ ಪರಿಸ್ಥಿತಿ ಉದ್ಭವ ಆಗೋದಿಲ್ಲ. ಪಕ್ಷ ಅವರಿಗೆ ಮೋಸ ಮಾಡಿದೆ ಎಂಬ ವಿಚಾರವೂ ಬರುವುದಿಲ್ಲ. ಮೋಸವೇ ಮಾಡಿಲ್ಲ ಎಂದಾಗ ಇಂತಹ ಮಾತುಗಳ ಅವಶ್ಯಕತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವೋಲಿಸುತ್ತೇವೆ ಎಂದರು.