ಚಿಕ್ಕಮಗಳೂರು :ಜಿಲ್ಲಾಸ್ಪತ್ರೆಗೆ ಹೋದವರು ಮರಳಿ ಬರುವ ಗ್ಯಾರಂಟಿ ಇಲ್ಲ. ದಿನಕ್ಕೆ 15 ರಿಂದ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗೆ ಹೋದ ಬಹುತೇಕರು ಸಾಯುತ್ತಿದ್ದಾರೆ ಎಂದು ಜಿಲ್ಲೆಯ ಕೊಪ್ಪ ಕಿಸಾನ್ ಘಟಕದ ಅಧ್ಯಕ್ಷ ಅಶೋಕ್ ನಾರ್ವೆ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾದ್ರೆ ಸಾವು ಖಚಿತ : ಅಶೋಕ್ ನಾರ್ವೆ ಆರೋಪ - ಸುಳ್ಳು ದಾಖಲೆ
ಕೊಪ್ಪದ ಹಲವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾರೆ. ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ದಾಖಲೆ ನೀಡುತ್ತಿದೆ. ನಿತ್ಯ 15-20 ಜನರು ಸತ್ತರೂ ಕೇವಲ 1-2 ಅಂತ ದಾಖಲೆ ನೀಡುತ್ತಿದ್ದಾರೆ..

ಅಶೋಕ್ ನಾರ್ವೆ
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾದ್ರೆ ಸಾವು ಖಚಿತ
ಕೊಪ್ಪದ ಹಲವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾರೆ. ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ದಾಖಲೆ ನೀಡುತ್ತಿದೆ. ನಿತ್ಯ 15-20 ಜನರು ಸತ್ತರೂ ಕೇವಲ 1-2 ಅಂತ ದಾಖಲೆ ನೀಡುತ್ತಿದ್ದಾರೆ ಎಂದು ದೂರಿದರು.
ನೀವು ನೀಡುವ ಸುಳ್ಳು ಲೆಕ್ಕದಿಂದ ಜನರು ಬೀದಿಗೆ ಬರುತ್ತಾರೆ. ಇದರಿಂದ ಮತ್ತಷ್ಟು ಸಾವು-ನೋವು ಸಂಭವಿಸುತ್ತವೆ ಎಂದು ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಅಶೋಕ್ ನಾರ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.