ಕರ್ನಾಟಕ

karnataka

ETV Bharat / state

ಕಡೂರು ಪೊಲೀಸರಿಂದ ಅಡಿಕೆ ಕಳ್ಳರ ಬಂಧನ, 10 ಲಕ್ಷ ರೂ ಮೌಲ್ಯದ ಅಡಿಕೆ ವಶ - ಚಿಕ್ಕಮಗಳೂರು ಕಡೂರು ಅಡಿಕೆ ಕಳ್ಳರ ಬಂಧನ

ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಕಡೂರು ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.

arrest-of-chikkamagalur-kadur-nut-thieves
ಅಡಿಕೆ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾದ ಕಡೂರು ಪೊಲೀಸರು

By

Published : Dec 26, 2019, 8:10 AM IST

ಚಿಕ್ಕಮಗಳೂರು :ಅಡಿಕೆ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಕಡೂರು ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗ್ಗಿನ ಜಾವ ಅಡಿಕೆ ಸಂಗ್ರಹಣೆ ಸ್ಥಳಗಳನ್ನು ನೋಡಿಕೊಂಡು ರಾತ್ರಿ ವೇಳೆ ಪ್ಲಾನ್ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮರ ಕುರಿತು ಕಡೂರು ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು.

ನಗರದ ಬೆಂಕಿ ಲಕ್ಷ್ಮಮ್ಮ ಕಲ್ಯಾಣ ಮಟಂಪದ ಬಳಿ ಲೋಹಿತ್ ಎಂಬ ವ್ಯಕ್ತಿ ಆಟೋದಲ್ಲಿ 40 ಚೀಲ ಅಡಿಕೆ ತುಂಬಿಕೊಂಡು ಮಾರಾಟ ಮಾಡಲು ಬರುತ್ತಿರುವ ಸುದ್ದಿ ತಿಳಿದು ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವಾರು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಪ್ರಕರಣದಲ್ಲಿ ಮನ್ಸೂರ್, ಶಾಹಿದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 10 ಲಕ್ಷ ರೂ ಮೌಲ್ಯದ ಒಟ್ಟು 50 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿರುವ ಕಡೂರು ಪೋಲಿಸರು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details