ಚಿಕ್ಕಮಗಳೂರು : ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಎನ್ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ಹಿರೇಗದ್ದೆಯಲ್ಲಿ 1.50 ಲಕ್ಷ ಮೌಲ್ಯದ ಅಡಿಕೆ ಕಳ್ಳತನವಾಗಿತ್ತು. ಶ್ರೀನಿವಾಸ್ ಎಂಬ ಆರೋಪಿ ಭಾಸ್ಕರ್ ಎಂಬುವರ ತೋಟದಲ್ಲಿ ಅಡಿಕೆ ಮರ ಕಡಿದು ಗೊನೆ ಕಳವು ಮಾಡುವಾಗ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ರೊಚ್ಚಿಗೆದ್ದ ತೋಟದ ಮಾಲೀಕ ಆತನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.