ಕರ್ನಾಟಕ

karnataka

ETV Bharat / state

ಚಿತ್ರ ಮಂದಿರದ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು: ಕೆಲಕಾಲ ಸಿನಿಮಾ ಸ್ಥಗಿತ - ಚಿತ್ರ ಮಂದಿರದ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು

ಚಿಕ್ಕಮಗಳೂರಿನ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಸಿನಿಮಾ ಪ್ರದರ್ಶನವಾಗುತ್ತಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ರಾದ್ಧಾಂತ ಮಾಡಿದರು.

Appu fans burst fire crackers inside theatre
ಚಿತ್ರ ಮಂದಿರದ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು

By

Published : Oct 28, 2022, 5:09 PM IST

ಚಿಕ್ಕಮಗಳೂರು:ದಿ.ಪುನೀತ್​​ ರಾಜ್​​ಕುಮಾರ್​ ಅಭಿನಯದ ಗಂಧದ ಗುಡಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಚಿಕ್ಕಮಗಳೂರಿನ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನವಾಗಿದ್ದು, ಈ ವೇಳೆ ಚಿತ್ರ ಮಂದಿರದೊಳಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದಾರೆ.

ಚಿತ್ರ ಮಂದಿರದ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು..

ಸಿನಿಮಾ ಮಂದಿರದ ಒಳಗೆ ಪಟಾಕಿ ಹಚ್ಚಿದ ಪರಿಣಾಮ ಹೊಗೆ ಆವರಿಸಿದ ಕೆಲಕಾಲ ಸಿನಿಮಾವನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ನಿಮಿಷದ ಬಳಿಕ ಮತ್ತೆ ಸಿನಿಮಾ ಆರಂಭವಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಸಿನಿಮಾ ನೋಡಿ ಶುಭ ಹಾರೈಸಿದ್ದಾರೆ.

ಸಿನಿಮಾ ಆರಂಭವಾಗುತ್ತಿದಂತೆ ಪುನೀತ್ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂತೋಷದಿಂದ ಸಂಭ್ರಮಿಸಿದ್ದರು. ಚಿತ್ರ ವೀಕ್ಷಣೆಗಾಗಿ ನೂರಾರು ಮಂದಿ ಅಭಿಮಾನಿಗಳು ಚಿತ್ರಮಂದಿರದತ್ತ ಧಾವಿಸಿ ಬರುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪುನೀತ್ ಕಟೌಟ್​​ಗೆ ಹಾರ ಹಾಕಿ, ಹಾಲು ಸುರಿದಿದ್ದಾರೆ. ಇದೇ ವೇಳೆ ಅರಣ್ಯ ಅಧಿಕಾರಿಗಳಿಗೆ ಸನ್ಮಾನ ಹಾಗೂ ಗಿಡ ನೆಡುವ ಕಾರ್ಯಕ್ಕೂ ಅಪ್ಪು ಅಭಿಮಾನಿಗಳು ಮುಂದಾದರು.

ಇದನ್ನೂ ಓದಿ:ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ

ABOUT THE AUTHOR

...view details