ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು 5 ತಿಂಗಳ ಗಂಡು ಮಗು ಸೇರಿದಂತೆ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರಲ್ಲಿ ಇಂದು 5 ತಿಂಗಳ ಮಗು ಸೇರಿ ಐವರಿಗೆ ಕೊರೊನಾ - chikkmagaluru corona update
ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 5 ತಿಂಗಳ ಗಂಡು ಮಗು ಸೇರಿ 5 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
![ಚಿಕ್ಕಮಗಳೂರಲ್ಲಿ ಇಂದು 5 ತಿಂಗಳ ಮಗು ಸೇರಿ ಐವರಿಗೆ ಕೊರೊನಾ another 5 corona positive cases found in chikkmagaluru](https://etvbharatimages.akamaized.net/etvbharat/prod-images/768-512-7725486-988-7725486-1592831024147.jpg)
5 ತಿಂಗಳ ಗಂಡು ಮಗು, 22 ವರ್ಷದ ಮಹಿಳೆ, 45 ವರ್ಷದ ಮಹಿಳೆ, 59 ವರ್ಷದ ಪುರುಷ, 17 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಸೋಂಕಿತ ಪೊಲೀಸ್ ಸಿಬ್ಬಂದಿಯ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಹಾಗೂ ಮಹಾರಾಷ್ಟ್ರದಿಂದ ಶೃಂಗೇರಿಗೆ ಮರಳಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನ ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ 19 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 22 ಸಕ್ರಿಯ ಪ್ರಕರಣಗಳಿವೆ.