ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಮನನೊಂದ ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಶರಣು! - ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ

ಅನಾರೋಗ್ಯದಿಂದ ಬಳಲುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಮೂಡಬಾಗಿಲಿನ ನರಸೀಪುರ ಕಾಲೋನಿಯಲ್ಲಿ ನಡೆದಿದೆ.

ಅನಾರೋಗ್ಯದಿಂದ ಮನನೊಂದ ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಶರಣು !

By

Published : Nov 23, 2019, 3:06 PM IST

ಚಿಕ್ಕಮಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಮೂಡಬಾಗಿಲಿನ ನರಸೀಪುರ ಕಾಲೋನಿಯಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆ ಸುನೀತಾ(38) ಮನೆಯ ಹಿಂಭಾಗ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 4 ವರ್ಷದ ಹಿಂದೆ ಅಪಘಾತದಲ್ಲಿ ಬೆನ್ನು, ಕೈಗೆ ಗಂಭೀರ ಗಾಯವಾಗಿ ನೋವಿನಿಂದ ನರಳುತ್ತಿದ್ದರು. ಸಂಪೂರ್ಣವಾಗಿ ಗುಣವಾಗದೆ ನೋವು ಕಾಣಿಸಿಕೊಳ್ಳುತ್ತಿದ್ದ ಪರಿಣಾಮ ಅಂಗನವಾಡಿ ಕೆಲಸಕ್ಕೂ ಸಹ ಸರಿಯಾಗಿ ಹೋಗಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದು ಸದ್ಯ ಇಹಲೋಕ ತ್ಯಜಿಸಿದ್ದಾರೆ.

ಮುಳುವಳ್ಳಿ ಶಾಲೆಯ ವಠಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯಾಗಿ ಸುನೀತಾ ಕಾರ್ಯ ನಿರ್ವಹಿಸುತ್ತಿದ್ದರು. ಅತಿಯಾದ ನೋವಿನಿಂದ ಸರಿಯಾಗಿ ಕೆಲಸಕ್ಕೂ ಹಾಜರಾಗಲು ಆಗುತ್ತಿರಲಿಲ್ಲ. ಈ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದು ಎನ್‌ಆರ್‌ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details