ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ದೇವಸ್ಥಾನಕ್ಕೆ ದೇಣಿಗೆ ನೀಡಿ ಮಾದರಿಯಾದ ಭಿಕ್ಷುಕಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿಕ್ಷುಕಿ ದೇವಸ್ಥಾನಕ್ಕೆ 20 ಸಾವಿರ ರೂ. ದೇಣಿಗೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

chikkamagaluru beggar donates money
ಚಿಕ್ಕಮಗಳೂರು ಬಿಕ್ಷುಕ ಅಜ್ಜಿ

By

Published : Nov 23, 2021, 5:33 PM IST

Updated : Nov 23, 2021, 6:57 PM IST

ಚಿಕ್ಕಮಗಳೂರು: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಅಜ್ಜಿಯೊಬ್ಬರು ದೇವಸ್ಥಾನವೊಂದಕ್ಕೆ 20 ಸಾವಿರ ರೂ. ದೇಣಿಗೆ ನೀಡಿ ಸಾರ್ವಜನಿಕರನ್ನು ಹುಬ್ಬೇರಿಸುವಂತೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುವವರ ಬಳಿ ಹೆಚ್ಚಿನ ಹಣವಿರುವುದಿಲ್ಲ. ದಿನವಿಡೀ ಅವರಿವರ ಬಳಿ ಅಂಗಲಾಚಿ ಪಡೆದ ಹಣದಲ್ಲಿಯೇ ಹಸಿವನ್ನು ನೀಗಿಸಿಕೊಳ್ಳಬೇಕು. ಪರಿಸ್ಥಿತಿ ಹೀಗಿರುವಾಗ ಜಿಲ್ಲೆಯ ಕಡೂರಿನ ಅಜ್ಜಿಯೊಬ್ಬರು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದು ಆಡಳಿತ ಮಂಡಳಿಯವರಿಗೆ ಅಚ್ಚರಿ ಮೂಡಿಸಿದೆ.

ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರನ್ನ ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನ ಕಂಡ ಜನ ಆಡಳಿತ ಮಂಡಳಿಯ ಅಧ್ಯಕ್ಷನ ಹತ್ತಿರ ಭಿಕ್ಷೆ ಬೇಡಲು ಈಕೆ ಹವಣಿಸುತ್ತಿದ್ದಾಳೆಂದು ತಿಳಿದಿದ್ದಾರೆ. ಹೀಗಾಗಿ, ಆ ವೃದ್ಧೆಯನ್ನ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದೇ ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ.

ಆದರೆ, ಅಜ್ಜಿ ನೇರವಾಗಿ ದೇವಸ್ಥಾನದೊಳಗೆ ಹೋಗಿ ಅರ್ಚಕರ ಕೈಗೆ 500ರ 40 ನೋಟು ಕೊಟ್ಟಿದ್ದು, ಈ ಹಣದಲ್ಲಿ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಭಿಕ್ಷೆ ಬೇಡಿ ಉಳಿಸಿದ್ದ ಹಣವನ್ನು ಹೀಗೆ ದೇಣಿಗೆ ನೀಡಿರುವ ಅಜ್ಜಿಯ ಹೃದಯವೈಶಾಲ್ಯತೆಯನ್ನು ಕಂಡಿರುವ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ:ಮಕ್ಕಳು ಮೊಬೈಲ್‌ ನೋಡಿ ಹಾಳಾಗ್ತಾರೆ ಅನ್ಬೇಡಿ.. ಈ ಬಾಲಕನ ಪಾಂಡಿತ್ಯ ನೋಡಿ!

Last Updated : Nov 23, 2021, 6:57 PM IST

ABOUT THE AUTHOR

...view details