ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ ಅಲೆಕಾಡು ಇತಿಹಾಸ ಪ್ರಸಿದ್ಧ ಕ್ಷೇತ್ರದ ಮೂಲ ವಿಗ್ರಹ ಆಲೇಖಾನ್ ಎಸ್ಟೇಟ್ನ ಮರವೊಂದರ ಬುಡದಲ್ಲಿ ಪತ್ತೆಯಾಗಿದೆ.
ಮರವೊಂದರ ಕೆಳಗೆ ಪತ್ತೆಯಾಯ್ತು ವಿಗ್ರಹ ಏಪ್ರಿಲ್ 24ರಂದು ಅಲೆಕಾಡು ಇತಿಹಾಸ ಪ್ರಸಿದ್ಧ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ನಡೆದ ಗುಳಿಗ ದೈವದ ದರ್ಶನದಲ್ಲಿ, ಕ್ಷೇತ್ರದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ದೈವ ತಿಳಿಸಿತ್ತು. ಅದರಂತೆ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮೂರು, ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮರವೊಂದರ ಕೆಳಗೆ ನೋಡಿದಾಗ ದೈವದ ಕಂಚಿನ ಮೂರ್ತಿ, ಗಂಟೆಗಳು, ಕತ್ತಿ ಪತ್ತೆಯಾಗಿವೆ.
ಮರವೊಂದರ ಕೆಳಗೆ ಪತ್ತೆಯಾಯ್ತು ವಿಗ್ರಹ ಈ ಬಗ್ಗೆ ಮಾತನಾಡಿರುವ ಅಲೆಕಾಡು ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಚನ್ನಕೇಶವ ಎಂ.ಜೆ, ಗುಳಿಗ ದೈವದ ನುಡಿಯಂತೆ ಮೂಲ ವಿಗ್ರಹ ಪತ್ತೆಯಾಗಿದೆ. ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ ಮುಂದಿನ ದೈವ ದರ್ಶನದ ಹೇಳಿಕೆ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ IMF ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್
ನೂರಾರು ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ ಚಾಮುಂಡೇಶ್ವರಿ, ಗುಳಿಗ ದೈವ, ಬಬ್ಬುಸ್ವಾಮಿ ಸೇರಿದಂತೆ ಕೆಲ ದೈವಗಳ ಪೂಜೆ, ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯುತ್ತದೆ. ಈಗ ಮೂಲವಿಗ್ರಹ ಸಿಕ್ಕಿರುವುದು ಕ್ಷೇತ್ರದ ಮಹಿಮೆಯನ್ನು ಕಣ್ಮುಂದೆ ತಂದಿದ್ದು, ಭಕ್ತಾದಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.