ಕರ್ನಾಟಕ

karnataka

ETV Bharat / state

ಹೆಡ್​​ಲೈಟ್ ಇಲ್ಲದೇ 170 ಕಿ.ಮೀ ಆ್ಯಂಬುಲೆನ್ಸ್​​ ಓಡಿಸಿ ಕತ್ತಲಲ್ಲೇ ರೋಗಿಯನ್ನು ನಿಮ್ಹಾನ್ಸ್​​ಗೆ ಸೇರಿಸಿದ ಚಾಲಕ! - ಹೆಡ್​​ಲೈಟ್ ಇಲ್ಲದ ಆಂಬುಲೆನ್ಸ್​​ನಲ್ಲಿ ರೋಗಿ ಬೆಂಗಳೂರಿಗೆ

ಹೆಡ್​​ಲೈಟ್ ಇಲ್ಲದ ಆ್ಯಂಬುಲೆನ್ಸ್ ಓಡಿಸಿಕೊಂಡು ರೋಗಿಯನ್ನು ಸುಮಾರು 170 ಕೀ.ಮೀ ದೂರದ ಬೆಂಗಳೂರಿಗೆ ಕತ್ತಲಿನಲ್ಲಿಯೇ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.

ambulance without headlight from chikmgaloreto bengaluru
ಹೆಡ್​​ಲೈಟ್ ಇಲ್ಲದೇ 170 ಕಿ.ಮೀ ಆ್ಯಂಬುಲೆನ್ಸ್​​ ಓಡಿಸಿದ ಚಾಲಕ

By

Published : Mar 4, 2020, 7:47 PM IST

ಚಿಕ್ಕಮಗಳೂರು:ಹೆಡ್​​ಲೈಟ್ ಇಲ್ಲದ ಆ್ಯಂಬುಲೆನ್ಸ್ ಓಡಿಸಿಕೊಂಡು ರೋಗಿಯನ್ನು ಸುಮಾರು 170 ಕೀ.ಮೀ ದೂರದ ಬೆಂಗಳೂರಿಗೆ ಕತ್ತಲಿನಲ್ಲಿಯೇ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಹೆಡ್​​ಲೈಟ್ ಇಲ್ಲದೇ 170 ಕಿ.ಮೀ ಆ್ಯಂಬುಲೆನ್ಸ್​​ ಓಡಿಸಿ ಕತ್ತಲಲ್ಲೇ ರೋಗಿಯನ್ನು ನಿಮ್ಹಾನ್ಸ್​​ಗೆ ಸೇರಿಸಿದ ಚಾಲಕ!

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಖಾಸಗಿ ಆ್ಯಂಬುಲೆನ್ಸ್ ನಲ್ಲಿ ರೋಗಿಯನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಹಾಸನ ತಲುಪುತ್ತಿದ್ದಂತೆಯೇ ವಾಹನದ ಹೆಡ್​​​​ಲೈಟ್ ಕೈ ಕೊಟ್ಟಿದ್ದು, ಚಾಲಕ ಧೈರ್ಯ ಮಾಡಿ ಕತ್ತಲಿನಲ್ಲಿಯೇ ಬೆಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ಹಲವರಿಗೆ ಪೋನ್ ಮಾಡಿದ್ದರೂ ಯಾವುದೇ ನೆರವು ಸಿಕ್ಕಿಲ್ಲ. ಹೆಡ್ ಲೈಟ್ ಹಾಗೂ ಇಂಡಿಕೇಟರ್ ಇಲ್ಲದೇ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಕುಣಿಗಲ್ ತಲುಪುತ್ತಿದ್ದಂತೆಯೇ ಬೇರೊಂದು ಆ್ಯಂಬುಲೆನ್ಸ್​ ಹಿಂಬಾಲಿಸಿ ಬೆಂಗಳೂರು ತಲುಪಿದ್ದಾನೆ.

ತುರ್ತಾಗಿ ರೋಗಿಯೊಬ್ಬನನ್ನು ಚಿಕ್ಕಮಗಳೂರಿನಿಂದ ಬೆಂಗಳೂರಿನ ನಿಮ್ಹಾನ್ಸ್​​ಗೆ ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ. ದಾರಿ ಮಧ್ಯೆ ತುರ್ತು ಸಂಪರ್ಕ ಸಂಖ್ಯೆ 100 ಹಾಗೂ 108 ಕ್ಕೆ ಚಾಲಕ ಕರೆ ಮಾಡಿದರೂ ಯಾವುದೇ ಸಹಾಯ ಸಿಗದ ಕಾರಣ ಕತ್ತಲಿನಲ್ಲಿಯೇ ಆ್ಯಂಬುಲೆನ್ಸ್​​ ಬೆಂಗಳೂರು ತಲುಪಿದೆ.

ABOUT THE AUTHOR

...view details