ಚಿಕ್ಕಮಗಳೂರು: ಹಳೆ ತಹಶೀಲ್ದಾರ್ ಲಾಗಿನ್ ಐಡಿ ಬದಾಲವಣೆ ಮಾಡಿದೆ, ತಮಗೆ ಬೇಕಾದವರಿಗೆ ಜಮೀನು ಮಂಜೂರು ಮಾಡಿದ್ದಾರೆ ಎನ್ನುವ ಆರೋಪ ಕಡೂರು ತಾಲೂಕಿನ ತಹಶೀಲ್ದಾರ್ ವಿರುದ್ಧ ಕೇಳಿಬಂದಿದೆ.
ಈ ರೀತಿ ಅಕ್ರಮವಾಗಿ ಜಮೀನು ಮಂಜೂರು ಮಾಡಿದ್ದರಿಂದ ಇಬ್ಬರೂ ರೆವಿನ್ಯು ಇನ್ಸ್‌ಪೆಕ್ಟರ್ ಹಾಗೂ ಓರ್ವ ಗ್ರಾಮ ಲೆಕ್ಕಾಧಿಕಾರಿ ಬಲಿಯಾಗಿದ್ದಾರೆ. ಜಮೀನು ಪಡೆದವರು 1994 ರಲ್ಲಿ ಫಾರಂ 53 ಅರ್ಜಿಯನ್ನೇ ಹಾಕಿಲ್ಲ. ಆದರೂ ಜಮೀನಿನ ಸಾಗುವಳಿ ಚೀಟಿ ಮಾತ್ರ ಬಂದಿದೆ. ಇದು ಭೂಮಿ ಕೇಂದ್ರದಲ್ಲಿ ನಡೆದಿರುವ ದೊಡ್ಡ ಗೋಲ್ ಮಾಲ್ ಎಂದು ಸಾರ್ವಜನಿಕರು ದೂರಿದ್ದಾರೆ.
ಕಡೂರು ತಾಲೂಕಿನಲ್ಲಿ ಉಮೇಶ್ ಎಂಬುವರು ಹಾಲಿ ತಹಶೀಲ್ಡಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೇ ಹೊಸದಾಗಿ ತಹಶೀಲ್ದಾರ್ ಆಗಿ ಬಂದ ಮೇಲೆ ಈ ಹಿಂದೆ ಕಡೂರಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದವರ ಲಾಗಿನ್ ಐಡಿ ಕ್ಲೋಸ್ ಮಾಡಿ, ಕಾನೂನಿನ ಪ್ರಕಾರ ಇವರ ಲಾಗಿನ್‍ನಲ್ಲಿ ಕೆಲಸ ಮಾಡಬೇಕು. ಆದರೇ ಇವರು ಹಳೇ ತಹಶೀಲ್ದಾರ್ ಐಡಿಯನ್ನ ಕ್ಲೋಸ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬದಲಾಗಿ ಹಳೇ ಐಡಿ ಬಳಸಿ, ಕಡೂರಿನ ಎಮ್ಮೆದೊಡ್ಡೆ ಗ್ರಾಮದಲ್ಲಿ ತನ್ನ ಅಜ್ಜ-ಅಜ್ಜಿಗೆ ತಲಾ 4 ಎಕರೆ 38 ಗುಂಟೆ ಹಾಗೂ ಕಡೂರಿನ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಗಳಿಗೆ ಬೆಳ್ಳಿಗುತ್ತಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನ ಅಕ್ರಮವಾಗಿ ಮಾಡಿಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.