ಕರ್ನಾಟಕ

karnataka

ETV Bharat / state

'ಇದು ಲವ್‌ ಜಿಹಾದ್' ಎಂದ ಹಿಂದೂ ಕಾರ್ಯಕರ್ತರು: 'ಮಗಳು-ಅಳಿಯ ಸುರಕ್ಷಿತವಾಗಿರಲಿ' ಎಂದ ತಾಯಿ

ಚಿಕ್ಕಮಗಳೂರಿನಲ್ಲಿ ಲವ್​ ಜಿಹಾದ್​ ಆರೋಪ ಪ್ರಕರಣ ಕೇಳಿ ಬಂದಿದೆ. ಆದ್ರೆ ಯುವತಿಯ ತಾಯಿ ಇಬ್ಬರ ಮದುವೆಗೆ ಒಪ್ಪಿಗೆ​ ಕೊಟ್ಟಿದ್ದಾರಂತೆ.

love jihad in Chikkamagalur  Chikkamagalur love jihad case  love jihad Allegation  ನನ್ನ ಮಗಳು ಅಳಿಯ ಸುರಕ್ಷಿತವಾಗಿ ಮನೆಗೆ ಬಂದ್ರೆ ಸಾಕು  ಲವ್​ ಜಿಹಾದ್​ ಆರೋಪ ನಿರಾಕರಿಸಿದ ತಾಯಿ  ಚಿಕ್ಕಮಗಳೂರಿನಲ್ಲಿ ಲವ್​ ಜಿಹಾದ್​ ಆರೋಪ  ಸಬ್ ರಿಜಿಸ್ಟ್ರಾರ್ ಆಫೀಸ್​ಗೆ ತೆರಳಿದ್ದ ಲವ್​ ಬರ್ಡ್ಸ್  ಪೊಲೀಸ್​ ಠಾಣೆಯಲ್ಲಿ ಹೈಡ್ರಾಮಾ  ಹೆತ್ತ ಮಗಳಿಗಾಗಿ ಗೋಗರೆದ ತಾಯಿ  ಅವರಿಬ್ಬರ ಮದುವೆಗೆ ಯುವತಿಯ ತಾಯಿ ಗ್ರೀನ್​ ಸಿಗ್ನಲ್​
ಲವ್​ ಜಿಹಾದ್​ ಆರೋಪ ನಿರಾಕರಿಸಿದ ತಾಯಿ

By

Published : Sep 15, 2022, 11:38 AM IST

Updated : Sep 15, 2022, 12:14 PM IST

ಚಿಕ್ಕಮಗಳೂರು: ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹ ನೋಂದಣಿಗೆ ತೆರಳಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಲವ್ ಜಿಹಾದ್ ಆರೋಪ ಮಾಡಿ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿಂದೂ ಕಾರ್ಯಕರ್ತರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸಬ್ ರಿಜಿಸ್ಟ್ರಾರ್ ಆಫೀಸ್​ಗೆ ತೆರಳಿದ್ದ ಪ್ರೇಮಿಗಳು​: ದಾಸರಳ್ಳಿಯ ಲಕ್ಷೀಪುರ ಗ್ರಾಮದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರೂ ವಿವಾಹ ನೋಂದಣಿಗೆಂದು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದರು. ವಿಚಾರ ತಿಳಿದ ಹಿಂದೂ ಸಂಘಟನೆಯ ಕೆಲವು ಯುವಕರು 'ಇದು ಲವ್ ಜಿಹಾದ್ ಪ್ರಕರಣ' ಎಂದು ಆರೋಪಿಸಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆ ತಂದಿದ್ದರು.

ಮತ್ತೊಂದೆಡೆ, ಈ ವಿಷಯ ತಿಳಿಯುತ್ತಿದ್ದಂತೆ ಎಸ್​ಡಿಪಿಐ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ಧಾವಿಸಿ ಯುವಕ, ಯುವತಿ ಇಬ್ಬರೂ ವಯಸ್ಕರಾಗಿದ್ದು ವಿವಾಹ ನೋಂದಣಿಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದು ಲವ್‌ ಜಿಹಾದ್‌ ಪ್ರಕರಣವೇ? ಹಿಂದೂ ಯುವತಿಯ ತಾಯಿ ಹಾಗು ಎಸ್ಪಿ ಪ್ರತಿಕ್ರಿಯೆ ಇಲ್ಲಿದೆ..

ಪೊಲೀಸ್​ ಠಾಣೆಯಲ್ಲಿ ನಾಟಕೀಯ ಬೆಳವಣಿಗೆ:ಇದಾದ ಸ್ವಲ್ಪ ಸಮಯದಲ್ಲೇ ಬಿಜೆಪಿಯ ಹಲವು ಮುಖಂಡರು ಠಾಣೆ ಬಳಿ ಜಮಾಯಿಸಿದ್ದಾರೆ. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಸ್ಪಿ ಉಮಾ ಪ್ರಶಾಂತ್ ಠಾಣೆಗೆ ಭೇಟಿ ನೀಡಿ ಯುವತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಯುವಕನನ್ನು ಗ್ರಾಮಾಂತರ ಠಾಣೆಗೆ ಕರೆದೊಯ್ಯಲಾಯಿತು.

ಎಸ್​ಪಿ ಉಮಾ ಪ್ರಶಾಂತ್​ ಹೇಳಿದ್ದೇನು?:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಂದ ವಿವರವಾದ ದೂರು ಪಡೆಯಲಾಗಿದೆ. ನಾಲ್ವರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನ್ನನ್ನು ಮದುವೆಯಾಗದಂತೆ ತಡೆದಿದ್ದಾರೆ ಎಂದು ಯುವಕ ಮತ್ತು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅವರು ಇಬ್ಬರೂ ವಯಸ್ಕರಾಗಿದ್ದಾರೆ. ಸಂಘಟನೆಯೊಂದರ ಪ್ರಮುಖ ಮುಖಂಡ ಶ್ಯಾಮ್ ಸೇರಿದಂತೆ ನಾಲ್ವರ ವಿರುದ್ದ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಪರಿಶೀಲಿಸಿ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವಂತೆ ಒಂದು ಸಂಘಟನೆಯವರು ಒತ್ತಾಯಿಸಿದ್ದಾರೆ ಎಂದರು.

ಹೆತ್ತ ಮಗಳಿಗಾಗಿ ತಾಯಿ ಕಣ್ಣೀರು:ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಆಗಮಿಸಿದ ಯುವತಿಯ ತಾಯಿ ಪೊಲೀಸ್​ ಠಾಣೆ ಮುಂದೆ ಕಣ್ಣೀರು ಹಾಕಿದ್ರು. ಮಗಳು ಪೊಲೀಸ್ ಜೀಪ್ ಹತ್ತುವಾಗ ನೊಂದುಕೊಂಡ ತಾಯಿ, ನನ್ನ ಮಗಳನ್ನು ನೋಡಲು, ಮಾತನಾಡಲು ಬಿಡಿ ಎಂದರು. ತದ ನಂತರ ಪೊಲೀಸರು ತಾಯಿಗೆ ಮಗಳ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಮದುವೆಗೆ ಯುವತಿಯ ತಾಯಿಯಿಂದ ಒಪ್ಪಿಗೆ​:ಕೆಲಕಾಲ ತಾಯಿ-ಮಗಳು ಮಾತುಕತೆ ನಡೆಸಿದ ಬಳಿಕ ಠಾಣೆಯಿಂದ ಹೊರ ಬಂದ ತಾಯಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನನ್ನ ದೊಡ್ಡ ಮಗಳು ಕೇಳಿದಾಗಲೂ ಆಕೆ ನಾನು ಬರುವುದಿಲ್ಲ ಎಂದು ಹೇಳಿದ್ದಾಳೆ. ಅವಳು ನನ್ನ ಮನೆಗೆ ಬರದಿದ್ರೂ ಪರವಾಗಿಲ್ಲ. ಅವರ ಅತ್ತೆ, ಮಾವನನ್ನು ಚೆನ್ನಾಗಿ ನೋಡಿಕೊಳ್ಳಲಿ. ಆಕೆ ಜೀವನದಲ್ಲಿ ಸುಖವಾಗಿರಲಿ. ನನ್ನ ಮಗಳು ಈ ಮದುವೆಯಾಗುವುದು ನನಗೂ ಇಷ್ಟ. ಮಗಳು, ಅಳಿಯ ಇಬ್ಬರಿಗೂ ಯಾವುದೇ ತೊಂದರೆಯಾಗದಂತೆ ಲಕ್ಷ್ಮೀಪುರಕ್ಕೆ ಬಂದರೆ ಸಾಕು ಎಂದರು.

ಇದನ್ನೂ ಓದಿ:ಲವ್​ ಜಿಹಾದ್ ಕೇಸ್​: ಬಿಜೆಪಿ ಸಂಸದೆ ನವನೀತ್​ ರಾಣಾ, ಪೊಲೀಸ್​ ಮಧ್ಯೆ ವಾಗ್ವಾದ

Last Updated : Sep 15, 2022, 12:14 PM IST

ABOUT THE AUTHOR

...view details