ಚಿಕ್ಕಮಗಳೂರು: ಜಿಲ್ಲೆಯ ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರು ಮಸೀದಿಕೆರೆ ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ನಾಸೀರ್ ಅವರು ಅಸಹಾಯಕ ಸ್ಥಿತಿಯಲ್ಲಿರುವ ಜನರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ಮನೆ ಮನೆಗೆ ತೆರಳಿ ಕಿಟ್ ವಿತರಿಸಿದ ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ - Al Badria Jumma Masjid President TM Nasir
ಬಾಳೆಹೊನ್ನೂರು ಮಸೀದಿಕೆರೆ ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ನಾಸೀರ್ ಅವರು ತಮ್ಮ ವಾಹನದ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ದಿನಸಿ ಪದಾರ್ಥಗಳ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ನಾಸೀರ್ ಅವರಿಂದ ಕಿಟ್ ವಿತರಣೆ
ಲಾಕ್ಡೌನ್ನಿಂದಾಗಿ ಕಳೆದ ಒಂದು ತಿಂಗಳಿಂದ ಕಾರ್ಮಿಕರು, ಬಡವರು, ನಿರ್ಗತಿಕರು ತತ್ತರಿಸಿ ಹೋಗಿದ್ದಾರೆ. ನಿತ್ಯದ ಆಹಾರ ಹಾಗೂ ಪಡಿತರ ಸರಿಯಾಗಿ ಸಿಗದೇ ಕಂಗಾಲಾಗಿದ್ದು, ಇವರಿಗೆ ಅನುಕೂಲವಾಗಲೆಂದು 6 ಸಾವಿರಕ್ಕೂ ಅಧಿಕ ತರಕಾರಿ ಮತ್ತು ದಿನಸಿ ವಸ್ತುಗಳ ಕಿಟ್ ಅನ್ನು ಅವರು ವಿತರಿಸಿದರು.
ತಮ್ಮ ವಾಹನದ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ದಿನಸಿ ಪದಾರ್ಥಗಳ ಕಿಟ್ಗಳನ್ನು ನೀಡುತ್ತಿರುವ ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.