ಚಿಕ್ಕಮಗಳೂರು:ಪರಿಸರವಾದಿ ಡಿ.ವಿ. ಗಿರೀಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಖಂಡನೀಯ ಎಂದಿರುವ ಅವರು, ಬಾಲಕಿ ಮೇಲೆ ಆಗಿರಬಹುದಾದ ಮಾನಸಿಕ ಘಾಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ವಿ. ಗಿರೀಶ್ ಮತ್ತು ಅವರ ಗೆಳೆಯರ ಮೇಲೆ ಹಲ್ಲೆ ಆದ ವಿಚಾರವನ್ನು ನೋಡಿದೆ. ಪುಂಡರ ಗುಂಪೊಂದು ಇವರ ಮೇಲೆ ಹಲ್ಲೆ ನಡೆಸುವಾಗ 17 ವರ್ಷದ ಬಾಲಕಿ ಅಸಹಾಯಕವಾಗಿ ಎಲ್ಲವನ್ನೂ ವಾಹನದಿಂದಲೇ ನೋಡುತ್ತಿದ್ದಳು. ಇದು ಬಾಲಕಿಯ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಮಾನಸಿಕವಾಗಿ ಆಕೆಗೆ ಎಷ್ಟು ಘಾಸಿ ಆಗಿರಬಹುದು. ಆ ದುಷ್ಟರು ಅರೆಸ್ಟ್ ಆಗಬೇಕು. ಕಾನೂನಿನ ಬಗ್ಗೆ ಜನರಿಗೆ ಭಯವಿಲ್ಲವೇ? ಬೇರೆ ಮುನುಷ್ಯರ ಬಗ್ಗೆ ಗೌರವ ಇಲ್ಲವೇ?ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.