ಚಿಕ್ಕಮಗಳೂರು: ದಿ. ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ ಎಂದು ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪುನೀತ್ ಸರ್ಗೆ ಪದ್ಮಶ್ರೀ ಕೊಡಬೇಕೆಂದು ನಾನು ಬಯಸುತ್ತೇನೆ. ಸಾಧ್ಯವಾದಷ್ಟು ಬೇಗ ಕೊಡಲಿ ಅಂತಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
50-60 ವರ್ಷ ಮೇಲ್ಪಟ್ಟವರು ಜಿಮ್ ಸ್ವಲ್ಪ ಕಡಿಮೆ ಮಾಡಲಿ. ಭಾರ ಎತ್ತುವುದನ್ನು ಕಡಿಮೆ ಮಾಡಲಿ. ಜಿಮ್ ಮಾಡಬೇಕೆಂಬ ಆಸೆ ಇದ್ರೆ ಒಳ್ಳೆ ಟ್ರೈನರ್ ಸಲಹೆ ತೆಗೆದುಕೊಳ್ಳಲಿ. ಫಿಟ್ ಇರಬೇಕಂದ್ರೆ ಜಿಮ್ ಮಾಡಲೇಬೇಕು, ಇಲ್ಲ ಬೇರೆ ಆ್ಯಕ್ಟಿವ್ ಇರಬೇಕು. ಆರೋಗ್ಯವಾಗಿರಲಿ, ಆದ್ರೆ 50 ವರ್ಷದ ಬಳಿಕ ಎಚ್ಚರದಿಂದಿರಲಿ ಎಂದು ಇದೇ ವೇಳೆ ಪ್ರೇಮ್ ಸಲಹೆ ಕೊಟ್ಟರು.
ಇದನ್ನೂ ಓದಿ:ನಾಳೆ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯತಿಥಿ: ಕುಟುಂಬಸ್ಥರಿಂದ ಸಕಲ ಸಿದ್ಧತೆ