ಕರ್ನಾಟಕ

karnataka

ETV Bharat / state

ಲವ್ ಜಿಹಾದ್ ಹೆಸರಿನಲ್ಲಿ ವ್ಯವಸ್ಥಿತ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ - shobha karandlaje reaction on Love Jihad

ಲವ್ ಜಿಹಾದ್ ಕೇವಲ ಪ್ರೀತಿ, ಪ್ರೇಮ, ಮದುವೆಗೆ ಮಾತ್ರ ಉಳಿದಿಲ್ಲ. ಭಯೋತ್ಪಾದನೆಯ ಮತ್ತೊಂದು ಮುಖವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

Shobha karandlaje
ಸಂಸದೆ ಶೋಭಾ ಕರಂದ್ಲಾಜೆ

By

Published : Nov 4, 2020, 1:33 PM IST

ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಕೇವಲ ಪ್ರೀತಿ, ಪ್ರೇಮ, ಮದುವೆಗೆ ಮಾತ್ರ ಉಳಿದಿಲ್ಲ. ಭಯೋತ್ಪಾದನೆಯ ಮತ್ತೊಂದು ಮುಖವಾಗಿದೆ. ಇದು ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ಷಡ್ಯಂತ್ರವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ

ಲವ್​​ ಜಿಹಾದ್​​ ಕುರಿತು ಅವರೇ ಮಾತನಾಡಿರುವುದು, ಭಾಷಣ ಮಾಡಿರುವುದು ಬೆಳಕಿಗೆ ಬರುತ್ತಿದೆ. ಓವೈಸಿಯಂತಹ ಕೋಮುವಾದಿಗಳು ಬಹಿರಂಗವಾಗಿ ಮಾತನಾಡುವುದು ಆರಂಭವಾಗಿದೆ ಎಂದರು. ಇನ್ನೂ ಉಡುಪಿಯಲ್ಲಿ 17 ವರ್ಷದ ಯುವತಿಯೊಂದಿಗೆ ಯುವಕ ನಾಪತ್ತೆಯಾಗಿದ್ದಾನೆ. ಮೊಬೈಲ್ ಬಿಟ್ಟು ಹೋಗಬೇಕು, ಯಾವ ಕಾರು - ಬೈಕ್​​ನಲ್ಲಿ ಹೋಗಬೇಕೆಂಬ ಷಡ್ಯಂತ್ರ ಮೊದಲೇ ನಿರ್ಧಾರವಾಗಿತ್ತು. ಚಿಕ್ಕ ಹೆಣ್ಣು ಮಕ್ಕಳಿಗೆ ಹಣದ ಆಮಿಷ ತೋರಿಸಿ ಸಮಾಜ ಪರಿವರ್ತನೆಯ ಷಡ್ಯಂತ್ರ ನಡೆಯುತ್ತಿದೆ. ಕೂಡಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.

ABOUT THE AUTHOR

...view details