ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆ್ಯಸಿಡ್ ದಾಳಿ - ಈಟಿವಿ ಭಾರತ ಕರ್ನಾಟಕ

Acid attack in Chikkamagaluru: ಪಕ್ಕದ ಮನೆಯ ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೊಬ್ಬ ನಾಯಿಯ ಮಾಲೀಕನ ಮೇಲೆ ಆ್ಯಸಿಡ್ ಎರಚಿದ ಘಟನೆ ಎನ್.ಆರ್.ಪುರದಲ್ಲಿ ನಡೆದಿದೆ.

Etv Bharatacid-attack-on-man-for-barking-his-dog-incident-held-in-chikkamagaluru
ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆ್ಯಸಿಡ್ ದಾಳಿ

By ETV Bharat Karnataka Team

Published : Dec 5, 2023, 6:37 PM IST

ಚಿಕ್ಕಮಗಳೂರು:ನೆರೆಮನೆಯನಾಯಿ ಬೊಗಳಿದ್ದಕ್ಕೆ ಕೋಪಗೊಂಡು ಆ ನಾಯಿಯ ಮಾಲೀಕನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಜೇಮ್ಸ್ ಎಂಬಾತ ದಾಳಿ ಮಾಡಿರುವ ಆರೋಪಿ. ಸುಂದರ್​ರಾಜ್ ಗಾಯಗೊಂಡಿರುವ ವ್ಯಕ್ತಿ.

ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ತಾನು ಸಾಕಿದ ನಾಯಿ ಬೊಗಳಿದ್ದಕ್ಕೆ ಸುಂದರ್​ರಾಜ್​ ಅವರು ನಾಯಿಗೆ ಬೈಯುತ್ತಿರುವುದನ್ನು ಕಂಡ ಪಕ್ಕದ ಮನೆಯ ಜೇಮ್ಸ್, ಸುಂದರ್​ ತನಗೇ ಬೈಯುತ್ತಿದ್ದಾನೆ ಎಂದು ಭಾವಿಸಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಆ್ಯಸಿಡ್ ದಾಳಿ ಮಾಡಿದ ಆರೋಪಿ

ಸುಂದರ್​ರಾಜ್ ಅವರ ಮುಖ ಬಹುತೇಕ ಸುಟ್ಟಿದ್ದು, ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಜೇಮ್ಸ್ ನಾಪತ್ತೆಯಾಗಿದ್ದಾನೆ. ಎನ್‌.ಆರ್.ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗೆ ಶೋಧ ಆರಂಭಿಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ : 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್​ ಬಾವನ ಮೃತದೇಹ ಹೊರಕ್ಕೆ

ABOUT THE AUTHOR

...view details