ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಆರೋಪಿ ಅರೆಸ್ಟ್​ - ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ

ಡ್ರಿಂಕ್ ಅಂಡ್ ಡ್ರೈವ್ ಕೇಸ್​ಗೆ ಸಂಬಂಧಿಸಿದಂತೆ ದಂಡ ವಿಧಿಸಿದ್ದಾರೆಂದು ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

accused
ಆರೋಪಿ ಅರೆಸ್ಟ್​

By

Published : Oct 15, 2022, 6:39 AM IST

ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ ಆರೋಪಿಯೊಬ್ಬ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್​ನಲ್ಲಿ ನಡೆದಿದೆ.

ಅರವಿಂದ ನಗರದ ನಿವಾಸಿ ಲೋಕೇಶ್‍ ಎಂಬಾತ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದು, ಈತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಡ್ರಿಂಕ್ ಅಂಡ್ ಡ್ರೈವ್ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಪೊಲೀಸರು ಕೋರ್ಟ್‍ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಬಳಿಕ ಆರೋಪಿ ದಂಡ ಕಟ್ಟಿದ್ದ. ಫೈನ್​ ಕಟ್ಟಿದ ತಿಂಗಳ ಬಳಿಕ ನಿನ್ನೆ ಕೋರ್ಟ್​ಗೆ ಕುಡಿದು ಬಂದು ಜಡ್ಜ್ ಮೇಲೆ ಚಪ್ಪಲಿ ಎಸೆದಿದ್ದಾನೆ.

ಇದನ್ನೂ ಓದಿ:ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದ ಅಧಿಕಾರಿಗೆ 1 ಕೋಟಿ ದಂಡ ವಿಧಿಸಿದ ಕೋರ್ಟ್​

ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಕೋರ್ಟ್​ನಲ್ಲಿ ನಾನು ಏನು ತಪ್ಪು ಮಾಡಿದ್ದೇನೆ ಎಂದು ದಂಡ ಹಾಕಿದ್ದೀರಾ? ಅಂತಾ ಕೂಗಾಡಿದ್ದಾನೆ. ಲೋಕೇಶ್​ನ ವರ್ತನೆಗೆ ಕೋರ್ಟ್​ನಲ್ಲಿದ್ದ ವಕೀಲರು ಸೇರಿದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ABOUT THE AUTHOR

...view details