ಕರ್ನಾಟಕ

karnataka

ETV Bharat / state

ಗ್ರಾ.ಪಂ.ಸದಸ್ಯನಿಗೆ ಶಾಸಕರಿಂದ ಕೊಲೆ ಬೆದರಿಕೆ ಆರೋಪ - Chikkamagaluru latest news

ಪರಿಹಾರದ ಹಣ ಏನಾಯಿತು ಎಂದು ಪ್ರಶ್ನಿಸಿದ್ದಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಸಚಿನ್​ ಮರ್ಕಲ್​​
ಸಚಿನ್​ ಮರ್ಕಲ್​​

By

Published : Jul 17, 2021, 1:22 PM IST

ಚಿಕ್ಕಮಗಳೂರು:ಉತ್ತಮ ಪ್ರಜಾಕೀಯ ಪಕ್ಷದ ವಿಚಾರಗಳಿಂದ ಜನರಿಗೆ ಅರಿವು ಮೂಡಿಸುತ್ತಿದ್ದ, ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್​ಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಶಾಸಕ ಎಂ.ಪಿ.ಕುಮಾರಸ್ವಾಮಿಯವರಿಂದ ನನಗೆ ಜೀವ ಬೆದರಿಕೆಯಿದೆ: ಸಚಿನ್​ ಮರ್ಕಲ್​​

ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್​ಗೆ ಶಾಸಕರು ಕೊಲೆ ಬೆದರಿಕೆ ಹಾಕಿ, ರಾತ್ರೋರಾತ್ರಿ ಪೋಲಿಸ್ ಸ್ಟೇಷನ್​​ಗೆ ಕರೆಸಿ ವಾರ್ನಿಂಗ್ ಮಾಡಲು ಹೇಳಿದ್ದಾರೆ ಎಂದು ಸಚಿನ್ ಮರ್ಕಲ್ ದೂರಿದ್ದಾರೆ.

ಪ್ರವಾಹದಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರಸ್ತೆ ಹದಗೆಟ್ಟು ಹೋಗಿದೆ. ಶಾಸಕರು ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಎಂದು ನಾನು ಮಾತಾಡಿದ್ದೆ.

ಈ ಹಿನ್ನೆಲೆ ಶಾಸಕ ಎಂ.ಪಿ.ಕುಮಾರಸ್ವಾಮಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪರಿಹಾರದ ಹಣ ಏನಾಯಿತು ಎಂದು ಪ್ರಶ್ನಿಸುವುದು ತಪ್ಪೇ? ಪ್ರಜೆಗಳಿಂದ ಆಯ್ಕೆಯಾಗಿದ್ದ ಶಾಸಕ ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ನಾಳೆ ಏನಾದರೂ ನನ್ನ ಜೀವಕ್ಕೆ ತೊಂದರೆಯಾದರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರೇ ಹೊಣೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ABOUT THE AUTHOR

...view details