ಚಿಕ್ಕಮಗಳೂರು : ಹೆತ್ತ ಮಗಳನ್ನು ವೇಲ್ನಿಂದ ಕುತ್ತಿಗೆ ಬಿಗಿದು ಕೊಂದಿರುವ ತಂದೆಯೊಬ್ಬ ಮೃತದೇಹವನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿ ಹೋಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ.
ಮೃತಳನ್ನ 18 ವರ್ಷದ ರಾಧಾ ಎಂದು ಗುರುತಿಸಲಾಗಿದೆ. ಚಂದ್ರಪ್ಪ(48) ಎಂಬಾತಮಗಳನ್ನ ಕೊಂದ ಅಪ್ಪ ಆರೋಪಿ. ಈತ ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಂಚಿನಕೊಪ್ಪ ಗ್ರಾಮದ ಎಂದು ತಿಳಿದು ಬಂದಿದೆ.
ಮೃತ ಯುವತಿ ಯುವಕನೋರ್ವನನ್ನ ಪ್ರೀತಿಸುತ್ತಿದ್ದಳು. ಇದು ಮನೆಯವರಿಗೆ ಇಷ್ಟವಿರಲಿಲ್ಲ. ಮನೆಯವರು ಬೇಡ ಎಂದರೂ ಆಕೆ ಸುಮ್ಮನಿರಲಿಲ್ಲ.
ಹಾಗಾಗಿ, ಕುಟುಂಬಸ್ಥರು ರಾಧಾಳಿಗೆ ಅವನಿಂದ ದೂರ ಇರುವಂತೆ ಎಚ್ಚರಿಸಿದ್ದರು. ಆದರೂ, ಯುವತಿ ಆತನೊಂದಿಗೆ ಪ್ರೇಮವನ್ನ ಮುಂದುವರೆಸಿದ್ದಳು. ಅವನನ್ನೇ ಮದುವೆಯಾಗುತ್ತೇನೆಂದು ಹಠಕ್ಕೆ ಬಿದ್ದಿದ್ದಳು.
ಆಕೆಯ ಹಠವನ್ನ ಅರಿತ ಕುಟುಂಬಸ್ಥರು ಅವನಿಂದ ಆಕೆಯನ್ನ ಸ್ವಲ್ಪ ದಿನ ದೂರ ಮಾಡಿದರೆ ಅವನನ್ನ ಮರೆಸಬಹುದು ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಂದ್ರಪ್ಪನ ಅಕ್ಕನ ಮನೆಗೆ ಕರೆದೊಯ್ದು ಒಂದು ವಾರ ಬಿಟ್ಟಿದ್ದರು.