ಕರ್ನಾಟಕ

karnataka

ETV Bharat / state

ಬೈಕ್​​ ಸವಾರನ ಕಾಲಿನ ಮೇಲೆ ಹರಿದ ಲಾರಿ! - chickmagaluru accident latest news

ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿಯು ಬೈಕ್​ ಸವಾರನ ಕಾಲಿನ ಮೇಲೆ ಹರಿದಿದೆ. ಪರಿಣಾಮ ಬೈಕ್​ ಸವಾರನ ಒಂದು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Accident in chickmagaluru !
ಅಪಘಾತದಲ್ಲಿ ಬೈಕ್​ ಸವಾರನ ಮೇಲೆ ಹರಿದ ಲಾರಿ...ಬೈಕ್​ ಸವಾರನ ಕಾಲಿಗೆ ಗಂಭೀರ ಗಾಯ!

By

Published : Feb 27, 2020, 4:52 PM IST

ಚಿಕ್ಕಮಗಳೂರು: ನಗರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಬೈಕ್ ಸವಾರನ ಒಂದು ಕಾಲಿಗೆ ಗಂಭೀರ ಗಾಯವಾಗಿದೆ.

ಲಾರಿ-ಬೈಕ್​ ನಡುವೆ ಅಪಘಾತ

ನಗರದ ಎನ್​ಎಂಸಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಲಾರಿ ಹೋಗುತ್ತಿದ್ದ ವೇಳೆ ಬೈಕ್ ಸವಾರ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಆತನ ಕಾಲಿನ ಮೇಲೆ ಲಾರಿ ಹರಿದಿದೆ. ನಿವೃತ್ತ ಎಎಸ್​ಐ ಚಿಕ್ಕೇಗೌಡ ಈ ಅಪಘಾತದಲ್ಲಿ ತುತ್ತಾದ ವ್ಯಕ್ತಿಯಾಗಿದ್ದು, ಚಿಕ್ಕೇಗೌಡನ ಒಂದು ಕಾಲು ಸಂಪೂರ್ಣ ಗಾಯಗೊಂಡಿದೆ.

ಚಿಕ್ಕೇಗೌಡ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೆಲ ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿಯಾಗಿದ್ದರು. ಗಂಭೀರ ಅಪಘಾತಕ್ಕೆ ಒಳಗಾದ ಚಿಕ್ಕೇಗೌಡನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details