ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಕಾರು-ಬೈಕ್​ ನಡುವೆ ಡಿಕ್ಕಿ: ಒರ್ವ ಸಾವು, ಐವರಿಗೆ ಗಾಯ - ಬಣಕಲ್ ಪೊಲೀಸ್​ ಠಾಣೆ

ಕಾರು ಬೈಕ್​ ನಡುವೆ ಅಪಘಾತವಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Accident between a car and a bike in Chikmagalur
ಚಿಕ್ಕಮಗಳೂರಿನಲ್ಲಿ ಕಾರು,ಬೈಕ್​ ನಡುವೆ ಅಪಘಾತ

By

Published : Mar 18, 2021, 3:04 PM IST

ಚಿಕ್ಕಮಗಳೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ನೀರ್​ಗಂಡಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಕಾರು, ಬೈಕ್​ ನಡುವೆ ಡಿಕ್ಕಿ

ಸಂತೋಷ್ (55) ಮೃತ ದುರ್ದೈವಿ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಕಾರು ಮತ್ತು ಬೈಕ್ ಸಂಪೂರ್ಣ ಜಖಂ ಆಗಿವೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details