ಚಿಕ್ಕಮಗಳೂರು:ಜಿಲ್ಲೆಯಲೋಕೋಪಯೋಗಿ ಇಲಾಖೆಯ ಎಇಇ ಗವಿರಂಗಪ್ಪ ಮನೆ ಮೇಲೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರೀಶೀಲನೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ವಿಭಾಗದ ಎಇಇ ಆಗಿ ಗವಿರಂಗಪ್ಪ ಸೇರಿದ ಗಾಂಧಿನಗರದಲ್ಲಿರುವ ನಿವಾಸದಲ್ಲಿ ದಾಳಿ ಚಿಕ್ಕಮಗಳೂರು ಮತ್ತು ಉಡುಪಿ ವಿಭಾಗದ ಎಸಿಬಿ ಅಧಿಕಾರಿಗಳಿಂದ ದಾಖಲೆಗಳ ಪರೀಶೀಲನೆ ನಡೆಯುತ್ತಿದೆ.
ಎಸಿಬಿ ದಾಳಿ: ಲೋಕೋಪಯೋಗಿ ಎಇಇ ಮನೆಯಲ್ಲಿ ಚಿನ್ನದ ಗಟ್ಟಿ ಪತ್ತೆ! - ಚಿಕ್ಕಮಗಳೂರು ವಿಭಾಗದ ಎಇಇ ಗವಿರಂಗಪ್ಪ
ಗವಿರಂಗಪ್ಪ ಮನೆಯಲ್ಲಿ ಇಲ್ಲಿಯವರೆಗೂ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂ. ನಗದು ಪತ್ತೆಯಾಗಿದೆ.
acb raid
ಈ ವೇಳೆ, ಮನೆಯಲ್ಲಿ ಅಕ್ರಮ ಸಂಪತ್ತು ಪತ್ತೆಯಾಗಿದ್ದು, ಇಲ್ಲಿಯವರೆಗೂ ಚಿನ್ನದ ಗಟ್ಟಿ ಮತ್ತು 750 ಗ್ರಾಂ ಚಿನ್ನಾಭರಣ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ನಾಳೆವರೆಗೂ ಎಸಿಬಿ ದಾಳಿ ಮುಂದುವರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!
Last Updated : Mar 16, 2022, 3:09 PM IST