ಚಿಕ್ಕಮಗಳೂರು:ಮಹಿಳೆವೋರ್ವಳುಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟದ ದೊಡ್ಡಿ ಹಟ್ಟಿಯಲ್ಲಿ ನಡೆದಿದೆ.
ಪ್ರಿಯಕರನೊಂದಿಗಿದ್ದ ವೇಳೆ ಸಿಕ್ಕಿಬಿದ್ದ ಪತ್ನಿ: ಇನಿಯನೊಂದಿಗೆ ಸೇರಿ ಗಂಡನ ಕೊಂದ ರಾಗಿಣಿ! - The murder of her husband along with boy friend
ಪ್ರಿಯಕರನ ಜೊತೆಗೆ ಇದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದ ಪತ್ನಿವೋರ್ವಳು ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಂಡನ ಕೊಲೆ
ಪ್ರದೀಪ್ (30) ಕೊಲೆಯಾದ ವ್ಯಕ್ತಿ. ಪತ್ನಿ ರಾಗಿಣಿ ಹಾಗೂ ಈಕೆಯ ಪ್ರಿಯಕರ ಶ್ರೀನಿವಾಸ್ ಕೊಲೆಗೈದ ಆರೋಪಿಗಳು. ಪ್ರಿಯಕರನ ಜೊತೆಗೆ ಇದ್ದಾಗ ಪತಿಯ ಕೈಗೆ ರಾಗಿಣಿ ಸಿಕ್ಕಿಬಿದ್ದಿದ್ದಾಳೆ. ಈ ವೇಳೆ ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗ್ತಿದೆ.
ಆರೋಪಿ ರಾಗಿಣಿ ಹಾಗೂ ಶ್ರೀನಿವಾಸ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಖರಾಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.