ಚಿಕ್ಕಮಗಳೂರು: ಶಿಕ್ಷಕನ ಮಾತಿಗೆ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ, ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ಕೊಪ್ಪ ತಾಲೂಕಿನ ಭಂಡಿಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಆರನೇ ತರಗತಿ ಬಾಲಕನಿಗೆ ಕನ್ನಡ ಪಾಠ ಮಾಡುತ್ತಿದ್ದ ಶಿಕ್ಷಕ ನಾಗರಾಜ್ ಸರಿಯಾಗಿ ಬರೆಯುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ ಸಿಟ್ಟಿಗೆದ್ದ ಶಿಕ್ಷಕ ಹೊಡೆದಿದ್ದಾರೆ. ವಿದ್ಯಾರ್ಥಿಯ ಕಾಲಿಗೆ, ಬೆನ್ನಿಗೆ ಶಿಕ್ಷಕ ನಾಗರಾಜ್ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಕುರಿತು ವಿದ್ಯಾರ್ಥಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನ ಮೆಲೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆಂಥೋನಿ ರಾಜ್ ಮಾತನಾಡಿ, ಕನ್ನಡ ಪಾಠ ಮಾಡುವ ಶಿಕ್ಷಕರ ಪ್ರಶ್ನೆಗೆ ವಿದ್ಯಾರ್ಥಿ ಎದುರುತ್ತರ ನೀಡಿದ್ದಾನೆ. ಈ ಸಂದರ್ಭದಲ್ಲಿ ಶಿಕ್ಷಕ ಕೋಪಗೊಂಡು ಹೊಡೆದಿದ್ದಾರೆ. ಘಟನಾ ಸಂಬಂಧ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಇನ್ಸ್ಟಾಗ್ರಾಮ್ ನಲ್ಲಿ Sorry ಅಂತಾ ಬರೆದು ನೇಣು ಬಿಗಿದುಕೊಂಡ ಕಾಲೇಜು ವಿದ್ಯಾರ್ಥಿ