ಕರ್ನಾಟಕ

karnataka

ETV Bharat / state

ನಲ್ಲಿಯಲ್ಲಿ ಬಂತು ಕಲುಷಿತ ನೀರು... ನಿವಾಸಿಗಳು ಪ್ರತಿಭಟನೆ ಮಾಡಿದ್ದು ಹೇಗೆ ಗೊತ್ತಾ? - undefined

ಪ್ರತಿನಿತ್ಯ ನಗರಸಭೆ ಕಲುಷಿತ ನೀರು ಸರಬರಾಜು ಮಾಡುತ್ತಿದೆ ಎಂದು ಆರೋಪಿಸಿ ನಗರಸಭೆ ಬಿಡುವ ನೀರಿನಿಂದ ಯಾವುದೇ ಕಾಯಿಲೆ ಬಾರದಿರಲಿ ಎಂದು ಸ್ಥಳಿಯರು ಗಂಗೆ ಪೂಜೆ ಮಾಡಿ ಪ್ರತಿಭಟನೆ ನಡೆಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಶುದ್ಧ ಕುಡಿಯುವ ನೀರಿಗಾಗಿ ಪ್ರತಿಭಟನೆ

By

Published : Apr 24, 2019, 4:48 PM IST

ಚಿಕ್ಕಮಗಳೂರು : ಕುಡಿಯುವ ನೀರಿಗಾಗಿ ಸ್ಥಳೀಯ ನಿವಾಸಿಗಳು ನೀರಿಗೆ ವಿಶೇಷ ಪೂಜೆ ಸಲ್ಲಿಸಿ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ.

ಶುದ್ಧ ಕುಡಿಯುವ ನೀರಿಗಾಗಿ ಪ್ರತಿಭಟನೆ

ಪ್ರತಿನಿತ್ಯ ನಗರಸಭೆ ಕಲುಷಿತ ನೀರು ಸರಬರಾಜು ಮಾಡುತ್ತಿದೆ ಎಂದು ಆರೋಪಿಸಿ ನಗರಸಭೆ ಬಿಡುವ ನೀರಿನಿಂದ ಯಾವುದೇ ಕಾಯಿಲೆ ಬಾರದಿರಲಿ ಎಂದು ಸ್ಥಳಿಯರು ಗಂಗೆ ಪೂಜೆ ಮಾಡಿ ಪ್ರತಿಭಟನೆ ನಡೆಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ನಗರದ ಹಾಲೇನಹಳ್ಳಿ, ರಾಮನಹಳ್ಳಿ ಹಾಗೂ ಕೆಂಪನಹಳ್ಳಿಗೆ ಬಿಡುವ ಕುಡಿಯೋ ನೀರನ್ನ ಶುದ್ಧ ಮಾಡಿ ಬಿಡುವಂತೆ ಗಂಗೆ ಪೂಜೆ ನಡೆಸಿ ರತ್ನಗಿರಿ ಬೋರೆಯ ನೀರು ಶುದ್ಧೀಕರಣ ಕಾರ್ಯಾಲಯದವರೆಗೆ ನಾಗರಿಕ ಹಕ್ಕು ಹೋರಾಟ ವೇದಿಕೆ ಕಾರ್ಯಕರ್ತರು ಹಾಗೂ ನೂರಾರು ಸ್ಥಳೀಯ ನಿವಾಸಿಗಳುಪ್ರತಿಭಟನಾ ಮೆರವಣಿಗೆನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ನಗರದ ಪ್ರಮುಖ ಮೂರು ಬಡಾವಣೆಯ ಸಾರ್ವಜನಿಕರು ಭಾಗವಹಿಸಿ, ಕೂಡಲೆ ನಗರಸಭೆ ಶುದ್ಧ ಕುಡಿಯುವ ನೀರನ್ನ ಬಿಡುವಂತೆ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details