ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಮಗನೋರ್ವ ತನ್ನ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಪ್ರಕರಣ ಜಿಲ್ಲೆಯ ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ ಮಗ! - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸಖರಾಯ ಪಟ್ಟಣ ಪೊಲೀಸರು ಆರೋಪಿ ಸತೀಶ್ನನ್ನು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ ಮಗ!
ತಮ್ಮೇಗೌಡ (70) ಕೊಲೆಗೀಡಾಗಿರುವ ವೃದ್ಧ. ಖಾಸಗಿ ಬ್ಯಾಂಕ್ನಿಂದ ತಮ್ಮೇಗೌಡರ ಪುತ್ರ ಸತೀಶ್ ಟ್ರ್ಯಾಕ್ಟರ್ ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡದ ಹಿನ್ನೆಲೆ, ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದಿದ್ದರು. ಈ ಬಗ್ಗೆ ತಂದೆ ತಮ್ಮೇಗೌಡ ತಮ್ಮ ಮಗನನ್ನು ಪ್ರಶ್ನಿಸಿದ್ದಾರೆ. ತಂದೆ ಪ್ರಶ್ನಿಸಿದ್ದರಿಂದ ಕುಪಿತಗೊಂಡ ಸತೀಶ್, ಕಲ್ಲಿನಿಂದ ಜಜ್ಜಿ ತಂದೆಯನ್ನೇ ಕೊಲೆ ಮಾಡಿದ್ದಾನೆ.
ಸಖರಾಯ ಪಟ್ಟಣ ಪೊಲೀಸರು ಆರೋಪಿ ಸತೀಶ್ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.