ಚಿಕ್ಕಮಗಳೂರು: ಕೆಲಸಕ್ಕೆ ಹೋಗು ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ಪಾಪಿ ಮಗನೋರ್ವ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಕೆಲಸಕ್ಕೆ ಹೋಗು ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ! - etvbharat
ದೊಣ್ಣೆಯಿಂದ ತಾಯಿಗೆ ಬಲವಾಗಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮಹಿಳೆ ಅಸುನೀಗಿದ್ದಾಳೆ.

ಕೊಲೆಯಾದ ಮಹಿಳೆ ಸಾಕಮ್ಮ
ಸಾಕಮ್ಮ (55) ಮೃತ ಮಹಿಳೆ. ನಂದೀಶ್ (35) ತಾಯಿಯನ್ನ ಕೊಂದಿರುವ ಪಾಪಿ ಮಗ. ಜಿಲ್ಲೆಯ ಶೃಂಗೇರಿ ತಾಲೂಕಿನ ಹೋಕಳಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ದೊಣ್ಣೆಯಿಂದ ತಾಯಿಗೆ ಬಲವಾಗಿ ಹೊಡೆದು ಮಗ ಈ ಕೃತ್ಯ ಎಸಗಿದ್ದಾನೆ.
ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಪಿ ನಂದೀಶ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.