ಕರ್ನಾಟಕ

karnataka

ETV Bharat / state

ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ! - ಬಾಳೂರು ಹೋಬಳಿಯ ಚನ್ನಹಡ್ಲು ಗ್ರಾಮ

ಮದ್ಯದ ಅಮಲಿನಲ್ಲಿದ್ದ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ತಂದೆ ತಲೆಗೆ ಕೊಡಲಿಯಿಂದ ಹಲ್ಲೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Chikmagalur
ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ

By

Published : May 27, 2021, 9:46 AM IST

ಚಿಕ್ಕಮಗಳೂರು:ಮದ್ಯದ ಅಮಲಿನಲ್ಲಿದ್ದ ಮಗ ತನ್ನ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಚನ್ನಹಡ್ಲು ಗ್ರಾಮದಲ್ಲಿ ನಡೆದಿದೆ.

ಒಂದು ವರ್ಷದಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಸುಂದರ ಪೂಜಾರಿ ಎಂಬುವವರ ಮೇಲೆ ಮಗ ನಿತೇಶ್ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ನಿತೇಶ್ ತನ್ನ ವಿಶೇಷಚೇತನ ಸಹೋದರ-ಸಹೋದರಿಗೆ ಸಾರ್ವಜನಿಕರು ನೀಡಿದ್ದ ಹಣವನ್ನು ಕೊಡುವಂತೆ ನಿತ್ಯ ತಂದೆ-ತಾಯಿಗೆ ಪೀಡಿಸುತ್ತಿದ್ದನಂತೆ. ಪೋಷಕರು ಹಣ ನೀಡದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ತಾಯಿ ಬಳಿ ಜಗಳವಾಡಿ, ಬಳಿಕ ಕೊಡಲಿಯಿಂದ ತಂದೆಯ ತಲೆಗೆ ಹೊಡೆದಿದ್ದಾನೆ.

ಘಟನಾ ಸ್ಥಳಕ್ಕೆ ಭೇಡಿ ನೀಡಿದ ಪೊಲೀಸರು

ನಂತರ ಕಾರಿನಲ್ಲಿ ಕೊಡಲಿ ಸಮೇತ ಬಾಳೂರು ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ:ಕಾಳಸಂತೆ‌ಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ: ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details