ಕರ್ನಾಟಕ

karnataka

ETV Bharat / state

ಕೊಪ್ಪ: ಮನೆಯವರನ್ನ ಕಂಬಕ್ಕೆ ಕಟ್ಟಿ ನಗದು-ಚಿನ್ನಾಭರಣ ದೋಚಿದ ಖದೀಮರು! - ಜಯಪುರ ಕಳ್ಳತನೠ

ರಾತ್ರಿ ವೇಳೆ 20 ಜನರ ಗುಂಪೊಂದು ಒಂಟಿ ಮನೆಗೆ ನುಗ್ಗಿದ್ದು, ಕುಟುಂಬದ ಸದಸ್ಯರನ್ನೆಲ್ಲಾ ಕಂಬಕ್ಕೆ ಕಟ್ಟಿ ಹಾಕಿ ಮನೆಯಲ್ಲಿದ್ದ ಒಡವೆ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

Robbery
ಕಳ್ಳತನವಾಗಿರುವ ಮನೆ

By

Published : Mar 7, 2020, 4:11 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುಮಾರು 20 ಜನರ ತಂಡದಿಂದ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದ್ದು, ಮನೆಯಲ್ಲಿ ಇದ್ದ ನಾಲ್ಕು ಜನರನ್ನು ಕಂಬಕ್ಕೆ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಸುತ್ತಿ ಹಣ, ಚಿನ್ನಾಭರಣ ದೋಚಿ ಖದೀಮರು ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಡ್ಡೇತೋಟದ ಒಂಟಿ ಮನೆಯಲ್ಲಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಎರಡು ಲಕ್ಷ ನಗದು ದೋಚಿ ಕಳ್ಳರು ಎಸ್ಕೇಪ್​ ಆಗಿದ್ದಾರೆ ಎನ್ನಲಾಗಿದೆ.

ಮನೆಗೆ ನುಗ್ಗಿದ 20 ಜನ ಮುಖಕ್ಕೆ ಮಾಸ್ಕ್​ ಧರಿಸಿದ್ದರಂತೆ. ಬಾಗಿಲು ಮುರಿದು ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಮನೆ ಯಜಮಾನ ಗುಡ್ಡೇ ತೋಟದ ವಿಜಯ ರಾಘವನ್ ತಿಳಿಸಿದ್ದಾರೆ.

ಸದ್ಯ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details